ದೈವನರ್ತಕ, ವಿ.ವಿ. ನೌಕರ ಹೃದಯಾಘಾತದಿಂದ ನಿಧನ

ಉಪ್ಪಳ: ಪ್ರಸಿದ್ದ ದೈವ ನರ್ತಕ ಮಂಗಲ್ಪಾಡಿ ಕೃಷ್ಣನಗರ ನಿವಾಸಿ ಗೋಪಾಲಕೃಷ್ಣ.ಪಿ [53] ನಿಧನರಾದರು. ನಿನ್ನೆ ಬೆಳಿಗ್ಗೆ 7 ಗಂಟೆಯ ವೇಳೆ ಹೃದಯÁಘಾತ ಉಂಟಾಗಿದ್ದು, ಕೂಡಲೇ ಅವರನ್ನು ದೇರಳಕಟ್ಟೆ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನಿೆÃಡಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಲ್ಪ ಹೊತ್ತಿನಲ್ಲಿ ನಿಧನರಾಗಿದ್ದಾರೆ. ಇವರು ಮಂಗಳೂರು ಯೂನಿವರ್ ಸಿಟಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಪ್ರಸಿದ್ದ ದೈವ ನರ್ತಕರೂ, ಸಮಾಜ ಸೇವಕರೂ ಆಗಿದ್ದರು. ಕೋಮಾರು ಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕೊರಗಜ್ಜ, ಗುಳಿಗ, ಕೊರತಿ ಮೊದಲಾದ ದೈವದ ನರ್ತಕರಾಗಿದ್ದರು. ಮೃತರು ಪತ್ನಿ ಸುನಿತ ಟೀಚರ್, ಮಕ್ಕಳಾದ ಶ್ರಿಜನ್.ಜಿ ಕೃಷ್ಣ, ಶ್ರವಣ್.ಜಿ ಕೃಷ್ಣ, ಸಹೋದರಿ ಕಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ತಂದೆ ದೆಯ್ಯು, ತಾಯಿ ತನಿಯಾರು ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ಮೊಗ್ರಾಲ್ ಹೈಯರ್ ಸೆಕಂಡರಿ ಶಾಲೆ, ಐಲ ಶ್ರೀ ಶಾರದಾ ಬೋವಿ ಶಾಲೆ ಹಾಗೂ ಶಿರಿಯ ಶಾಲೆಗಳ ಅಧ್ಯಾಪಕರು ಹಾಗೂ ಹಿತೈಷಿಗಳ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page