ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಪೆರ್ಮುದೆ: ಕರ್ನಾಟಕದ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕುಡಾಲು ಮೇರ್ಕಳ ಪೆರ್ಮುದೆಯ ಯಕ್ಷಗಾನ ಕಲಾವಿದ ಜಯಪ್ರಕಾಶ್ ಶೆಟ್ಟಿ ಭಾಜನರಾಗಿದ್ದಾರೆ. ಕಟೀಲು ಮೇಳ, ಹನುಮಗಿರಿ ಮೇಳ ಮೊದಲಾದ ಮೇಳಗಳಲ್ಲಿ ವಿವಿಧ ವೇಷಗಳನ್ನು ಮಾಡಿ ಜನಮೆಚ್ಚುಗೆ ಪಡೆದ ಇವರಿಗೆ ಅರ್ಹವಾಗಿ ದ.ಕ. ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಯಕ್ಷಗಾನ ಬಯಲಾಟ ಸಂಘಟಿಸುವುದರೊಂದಿಗೆ ತಾಳಮದ್ದಳೆಯನ್ನು ಸಂಯೋಜಿಸಿ ಸಂಘಟಕರಾಗಿಯೂ ಇವರು ಹೆಸರು ಗಳಿಸಿದ್ದಾರೆ. ಇವರಿಗೆ ಲಭಿಸಿದ ಪುರಸ್ಕಾರ ಅಭಿಮಾನಿಗಳಲ್ಲಿ ಸಂತೋಷ ಉಂಟುಮಾಡಿದೆ.