ಧರ್ಮತ್ತಡ್ಕದಲ್ಲಿ ಅಂಗಡಿ ಕಳವು: ಪೊಲೀಸರಿಂದ ತನಿಖೆ

ಉಪ್ಪಳ: ಮಳೆ ವ್ಯಾಪಕಗೊಂಡಿ ರುವಂತೆ ಕಳ್ಳರ ಹಾವಳಿ ಮತ್ತೆ ವ್ಯಾಪಕ ಗೊಂಡಿದ್ದು, ಊರವರಲ್ಲಿ ಆತಂಕ ಸೃಷ್ಟಿ ಯಾಗಿದೆ. ಬದಿಯಡ್ಕ ಠಾಣಾ ವ್ಯಾಪ್ತಿಯ ಧರ್ಮತ್ತಡ್ಕದಲ್ಲಿ ಒಂದು ಅಂಗಡಿ ಕಳವು, ಇನ್ನೊಂದು ಅಂಗಡಿ ಕಳವುಗೆ ಯತ್ನ ನಡೆದಿದೆ. ಧರ್ಮತ್ತಡ್ಕದಲ್ಲಿ ಮೊಹಮ್ಮದ್ ಶಿಹಾಬ್ ಎಂಬವರ ಸ್ಟೇಷನರಿ ಹಾಗೂ ಪ್ಯಾನ್ಸಿ ಸಾಮಾಗ್ರಿ ಹೊಂದಿರುವ ಅಂಗಡಿಹಾಗೂ ಪರಿಸರದ ಕುಂಞಲಿ ಎಂಬವರ ಜೀನ್ಸ್ ಅಂಗಡಿ ಬಾಗಿಲ ಬೀಗವನ್ನು ಮುರಿಯಲಾಗಿದೆ. ಈ ಪೈಕಿ ಮೊಹಮ್ಮದ್ ಶಿಹಾಬ್ ಎಂಬವರ ಅಂಗಡಿಯಿAದ ಸುಮಾರು 30 ಸಾವಿರ ರೂ ಕಳವು ಹೋಗಿರುವುದಾಗಿ ದೂರಲಾಗಿದೆ. ಗುರುವಾರ ರಾತ್ರಿ ಘಟನೆ ಕಡೆ ದಿದ್ದು, ಶುಕ್ರವಾರ ಬೆಳಿಗ್ಗೆ ಅಂಗಡಿಗೆ ತಲುಪಿದಾಗ ಕಳವು ಕೃತ್ಯ ಗಮನಕ್ಕೆ ಬಂ ದಿದೆ. ಕಳವು ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನಿನ್ನೆ ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ. ಧರ್ಮತ್ತಡ್ಕದಲ್ಲಿ ಕಳವು ಕೃತ್ಯ ನಡೆದ ದಿನದಂದೇ ಇಲ್ಲಿಂದ ಸುಮಾರು ಎರಡು ಕಿಲೋ ಮೀಟರ್ ದೂರದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕನಿಯಾಲದಲ್ಲಿಯೂ ಒಂದು ಅಂಗಡಿಯಿAದ ಚಿಲ್ಲರೆ ಹಣ ಹಾಗೂ ಇನ್ನೊಂದು ಅಂಗಡಿ ಕಳವಿಗೆ ಯತ್ನ ನಡೆದಿರುವುದಾಗಿ ಹೇಳಲಾಗುತ್ತಿದೆ.

RELATED NEWS

You cannot copy contents of this page