ಧರ್ಮಶಾಸ್ತಾ ಭಜನಾ ಮಂದಿರ: ವಿಶೇಷ ಮಂಡಲಪೂಜೆ
ಕಾಸರಗೋಡು: ಶಾಸ್ತಾ ಭಜನಾ ಮಂದಿರದಲ್ಲಿ ನವೋ ಫ್ರೆಂಡ್ಸ್ ಮಲ್ಲಿಕಾರ್ಜುನ ವತಿಯಿಂದ ವಿಶೇಷ ಮಂಡಲಪೂಜೆ ಜರಗಿತು. ಪ್ರಧಾನಿ ನರೇಂದ್ರಮೋದಿಯವರ ಆರೋಗ್ಯ ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾ ಕಾರ್ಯ ಸಾಂಗವಾಗಿ ನೆರ ವೇರಲು ಪ್ರಾರ್ಥನೆ ನಡೆಸಲಾಯಿತು. ಈ ಸಂದರ್ಭದಲ್ಲಿ ೫೦ನೇ ವರ್ಷ ಶಬ ರಿಮಲೆ ಯಾತ್ರೆಗೈಯ್ಯುತ್ತಿರುವ ಕರುಣಾಕರ ಗುರುಸ್ವಾಮಿಯನ್ನು ನಮೋ ಫ್ರೆಂಡ್ಸ್ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಕಾರ್ಯದರ್ಶಿ ಕಿಶೋರ್ ಕುಮಾರ್ ಗೌರವಿಸಿದರು. ಬಾಲಕೃಷ್ಣ ಗುರುಸ್ವಾಮಿ, ವೆಂಕಟರಮಣ ಹೊಳ್ಳ, ಸುರೇಶ್ ಸುವರ್ಣ, ಲವ ಮೀಪುಗುರಿ, ಮಹೇಶ್, ಧನಂಜಯ, ಅನಂತರಾಜ್ ಹಾಗೂ ಅಯ್ಯಪ್ಪ ಭಕ್ತರು ಉಪಸ್ಥಿತರಿದ್ದರು.