ಧರ್ಮ ಜಾಗೃತಿಗೆ ಯಕ್ಷಗಾನದ ಕೊಡುಗೆ ಅಪಾರ- ಕೊಂಡೆವೂರು ಶ್ರೀ
ಉಪ್ಪಳ: ಪುರಾಣ ಕಥೆಗಳನ್ನು ಯಕ್ಷಗಾನದ ಮೂಲಕ ಆಸ್ವಾದಿ ಸುವುದರಿಂದ ಜನರಲ್ಲಿ ಧರ್ಮ ಜಾಗೃತಿ ಆಗುತ್ತದೆ. ಇಂತಹ ಕಲೆಗಳಿಗೆ ನಿರಂತರ ಪ್ರೋತ್ಸಾಹವನ್ನು ನೀಡಬೇಕು ಎಂದು ಕೊಂಡೆವೂರು ಮಠದ ಶ್ರೀ ಯೋಗಾ ನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಮಹಿಳಾ ಯಕ್ಷಕೂಟ ಪೊನ್ನೆ ತ್ತೋಡು ಕಯ್ಯಾರು ಹಾಗೂ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ, ಭಗವತೀ ನಗರ ಅಡ್ಕ ಇವರ ಸಹಯೋಗದೊಂದಿಗೆ ನಡೆದ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯ ಕಾರ್ಯದರ್ಶಿ ಉಮೇಶ್ ಎಂ. ಸಾಲಿಯಾನ್ ಕಲಾವಿದರನ್ನು ಬೆಳೆಸಿದರೆ ಕಲೆ ಬೆಳೆಯುತ್ತದೆ, ಕಲೆ ಬೆಳೆದರೆ ಸಮಾಜ ಬೆಳೆಯುತ್ತದೆ ಎಂದರು. ಹಿರಿಯ ಯಕ್ಷಗಾನ ಕಲಾವಿದ ಕೆ. ನರಸಿಂಹ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ರಾಮಮೋಹನ್ ಚೆಕ್ಕೆ, ಡಾ. ರಾಜಾರಾಮ್ ಭಟ್ ದೇವಕಾನ, ವಾಸು ಬಾಯಾರ್, ಅಜಿತ್ ಕುಮಾರ್ ಭಗವತೀ ನಗರ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಹಿರಿಯ ಮದ್ದಳೆಗಾರ ರಾದ ಪದ್ಯಾಣ ಶ್ರೀ ಶಂಕರನಾರಾಯಣ ಭಟ್ ಇವರಿಗೆ ಯಕ್ಷಕಯ್ಯಾರು ಪ್ರಶಸ್ತಿ, ಹಾಗೂ ಹಿರಿಯ ಪ್ರಸಾದನ ಕಲಾವಿದ ಜಯಂತ ಜೋಗಿ ಸಜಂಕಿಲ, ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ರಾಜಾರಾಮ್ ಬಲ್ಲಾಳ್ ಅಭಿನಂದನಾ ಭಾಷಣ ಗೈದರು. ಕೃಷ್ಣ ಪೊನ್ನೆತ್ತೋಡು ನಿರೂಪಿಸಿದರು. ಬಳಿಕ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಇವರಿಂದ ರತಿ ಕಲ್ಯಾಣ ತಾಳಮದ್ದಳೆ ಪ್ರಸ್ತುತಿಗೊಂಡಿತು.