ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚನೆ ಬಗ್ಗೆ ದೂರು: ಮಹಿಳೆ ವಿರುದ್ಧ ಕೇಸು
ಕಾಸರಗೋಡು: ಅಸಲಿಯೆಂದು ನಂಬಿಸಿ ನಕಲಿ ಚಿನ್ನದೊಡವೆ ಅಡವಿ ರಿಸಿ ಬ್ಯಾಂಕ್ನಿAದ 1,79,000 ರೂ. ಸಾಲ ಪಡೆದು ವಂಚನೆಗೈದ ಬಗ್ಗೆ ನೀಡಲಾದ ದೂರಿನಂತೆ ಕಾಸರಗೋ ಡು ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಸೂರ್ಲುವಿನ ಸುಬೈದಾ ಮಂಜಿಲ್ನ ಖೈರುನ್ನೀಸಾ (45) ಎಂಬಾಕೆ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಇ.ಎಸ್.ಎ.ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಕಾಸರಗೋಡು ಶಾಖೆಯ ಮೆನೇಜರ್ ಅನೀಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಖೈರುನ್ನೀಸಾ ಪ್ರಸ್ತುತ ಬ್ಯಾಂಕ್ನಲ್ಲಿ 2023 ಡಿಸೆಂಬರ್ 6ರಂದು 48.36 ಗ್ರಾಂ ನಕಲಿ ಚಿನ್ನದ ಬಳೆಗಳನ್ನು ಅಡವಿರಿಸಿ 1,79,000 ರೂ. ಸಾಲ ಪಡೆದು ವಂಚಿಸಿದ್ದಾಳೆAದು ಬ್ಯಾಂಕ್ ಮೆನೇಜರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.