ನಕಲಿ ಮತದಾನದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು-ನ್ಯಾ. ಕೆ. ಶ್ರೀಕಾಂತ್

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಕಲ್ಯಾಶ್ಶೇರಿಯಲ್ಲಿ ೯೨ರ ಹರೆಯದ ವೃದ್ಧೆಯ ಪರ ನಕಲಿ ಮತದಾನ ನಡೆಸಿದ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಕಲ್ಯಾಶ್ಶೇರಿಯಲ್ಲಿ  ನಡೆದಿರುವುದಾಗಿ  ಹೇಳಲಾಗುತ್ತಿರುವ ನಕಲಿ ಮತದಾನ ಸಿಪಿಎಂ ಮತ್ತು ಆ ಪಕ್ಷದ ಅನುಕೂಲಕರ ಸೇವಾ ಸಂಘಟನೆಗಳು ನಡೆಸಿದ  ಒಳಸಂಚಿನ ಒಂದು ಭಾಗವಾಗಿದೆ. ಇದರ ಹೊರತಾಗಿ ಕೆಲವು ಯುಡಿಎಫ್ ಕೇಂದ್ರಗಳಲ್ಲಿ ಇಂತಹ ನಕಲಿ ಮತದಾನ ನಡೆದ ಬಗ್ಗೆಯೂ ಗಮನಕ್ಕೆ ಬಂದಿದೆ. ಕಲ್ಯಾಶ್ಶೇರಿಯಲ್ಲಿ ನಡೆದ ಬೆಳವಣಿಗೆ ಚುನಾವಣಾ ಆಯೋಗದ ಕಾನೂನಿನ ಮೇಲೆ ಎಸೆದ ಸವಾಲಾಗಿದೆಯೆಂದೂ ಶ್ರೀಕಾಂತ್ ಹೇಳಿದ್ದಾರೆ.

You cannot copy contents of this page