ನಕಲಿ ಮತದಾನ ನಡೆಸಿದವರನ್ನು ಜೈಲಿಗಟ್ಟಬೇಕು- ಉಣ್ಣಿತ್ತಾನ್

ಕಾಸರಗೋಡು: ಕಲ್ಯಾಶ್ಶೇರಿಯಲ್ಲಿ ೯೨ರ ಹರೆಯದ ವೃದ್ದೆಯ ನಕಲಿ ಮತದಾನ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು,  ಅಪರಾಧಿಗಳನ್ನು  ಜೈಲಿಗಟ್ಟಬೇಕೆಂದು ಕಾಸರಗೋಡು ಲೋಕಸಭಾ ಕ್ಷೇತ್ರದ ಉಮೇದ್ವಾರ ರಾಜ್‌ಮೋಹನ್ ಉಣ್ಣಿತ್ತಾನ್ ಆಗ್ರಹಪಟ್ಟಿದ್ದಾರೆ.

ನಕಲಿ ಮತದಾನ ಹೆಸರಲ್ಲಿ ನಾಲ್ವರು ಚುನಾವಣಾ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಗೊಳಿಸಿದ ಮಾತ್ರದಲ್ಲಿ ಎಲ್ಲವೂ ಅಲ್ಲಿಗೇ ಮುಗಿಯದು. ಇದರಲ್ಲಿ ಶಾಮೀಲಾದ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರಗಿಸಿ ಅಪರಾಧಿಗಳನ್ನು ಜೈಲಿಗಟ್ಟಬೇಕೆಂದೂ ಉಣ್ಣಿತ್ತಾನ್ ಆಗ್ರಹಪಟ್ಟಿದ್ದಾರೆ.

RELATED NEWS

You cannot copy contents of this page