ನಗರದಲ್ಲಿ ಇಂದು ರಾತ್ರಿಯಿಂದ ಸಾರಿಗೆ ನಿಯಂತ್ರಣ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಇಂದು ಕಾಸರಗೋಡು ನಗರದಲ್ಲಿ ಸಾರಿಗೆ ನಿಯಂತ್ರಣ ಹೇರಲಾಗು ವುದು. ಮೇಲ್ಸೇತುವೆ ಸ್ಪಾನ್ ಕಾಂಕ್ರೀಟ್ ನಡೆಸುವ ಅಂಗವಾಗಿ ಇಂದು ರಾತ್ರಿ ೯ ಗಂಟೆಯಿಂದ ನಾಳ ಬೆಳಿಗ್ಗೆ ೯ ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುಗಡೆಗೊ ಳಿಸುವುದಾಗಿ ತಿಳಿಸಲಾಗಿದೆ.
ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಭ ಜನಾ ಮಂದಿರ ಹಾಗೂ ಕಾಸರಗೋಡು ಹೊಸ ಬಸ್ ನಿಲ್ದಾಣ ಮಧ್ಯೆ ೧೫೦ ಮೀಟರ್ ಭಾಗವನ್ನು ಮುಚ್ಚುಗಡೆಗೊಳಿಸಲಾಗುವುದು. ಹೊಸ ಬಸ್ ನಿಲ್ದಾಣದ ಸಮೀಪದಲ್ಲಿ ಕಾಂಕ್ರೀಟ್ಗಿರುವ ಯಂತ್ರಗಳನ್ನು ಸರ್ವೀಸ್ ರಸ್ತೆಯಲ್ಲಿರಿಸಬೇಕಾಗಿ ರುವುದರಿಂದ ರಸ್ತೆ ಮುಚ್ಚುಗಡೆಗೊಳಿಸುವುದಾಗಿ ನಿರ್ಮಾಣದ ಹೊಣೆಗಾರಿಕೆಯುಳ್ಳ ಊರಾಳುಂಗಲ್ ಲೇಬರ್ ಕಾಂಟ್ರಾ ಕ್ಟ್ ಕೋ-ಆಪರೇಟಿವ್ ಸೊಸೈಟಿ ತಿಳಿಸಿದೆ. ಮಂಗಳೂರು ಭಾಗದಿಂದ ಬರುವ ವಾಹನಗಳನ್ನು ಹೊಸ ಬಸ್ ನಿಲ್ದಾಣ ಜಂಕ್ಷನ್ನಿಂದ ತಿರುಗಿಸಿ ಎಂ.ಜಿ. ರೋಡ್ ಮೂಲಕ ಕಾಞಂಗಾಡ್-ಕಾಸರಗೋಡು ರಾಜ್ಯ ರಸ್ತೆ ಮೂಲಕ ಸಂಚರಿಸಬೇಕಾಗಿದೆ. ಚೆರ್ಕಳ ಭಾಗದಿಂದ ಬರುವ ವಾಹನಗಳು ವಿದ್ಯಾನಗರ-ಚೌಕಿ-ಉಳಿಯತ್ತಡ್ಕ ಮೂಲಕ ಮಧೂರು ರಸ್ತೆಯಲ್ಲಿ ತೆರಳಬೇಕೆಂದು ಪೊಲೀಸರು ತಿಳಿಸಿದ್ದಾರೆ.ಹೊಸ ಬಸ್ ನಿಲ್ದಾಣ ಸಮೀಪದಲ್ಲಿರುವ ಮುಂಡೋಳ್ ಆರ್ಕೇಡ್ ಮುರಿದು ತೆಗೆಯುವ ಕುರಿತಾದ ತರ್ಕ ನ್ಯಾಯಾಲಯದ ಪರಿಗಣನೆ ಯಲ್ಲಿರುವುದರಿಂದ ಅಲ್ಲಿ ಯಂತ್ರಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಕಾಂಕ್ರೀಟ್ಗಿರುವ ಯಂತ್ರಗಳು ಸರ್ವೀಸ್ ರಸ್ತೆಯಲ್ಲಿ ನಿಲ್ಲಿಸಲಾ ಗುವುದಿಂದ ರಸ್ತೆ ಮುಚ್ಚು ಗಡೆಗೊಳಿಸಬೇಕಾಗಿ ಬಂದಿದೆಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.