ನಗರದಲ್ಲಿ ಎನ್‌ಡಿಎಯ ಭರ್ಜರಿ  ರೋಡ್ ಶೋ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಉಮೇದ್ವಾರೆ ಎಂ.ಎಲ್. ಅಶ್ವಿನಿ ಮತ್ತು ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ   ಬಿಜೆಪಿಗೆ ಸೇರಿದ ಪದ್ಮಜಾ ವೇಣುಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಸೇರಿದಂತೆ ಎನ್‌ಡಿಎ ನೇತೃತ್ವದಲ್ಲಿ  ಕಾಸರಗೋಡು ನಗರದಲ್ಲಿ ಮೊನ್ನೆ ಭರ್ಜರಿ ರೋಡ್ ಶೋ ನಡೆಸಲಾಯಿತು. ಆ ಮೂಲಕ ಚುನಾವಣೆ ಪ್ರಚಾರಕ್ಕೂ ಭರ್ಜರಿ  ಚಾಲನೆ ನೀಡಲಾಯಿತು.  ಕಾಸರಗೋಡು ನಗರದಾದ್ಯಂತ ಪ್ರದಕ್ಷಿಣೆ ನಡೆಸಿದ ರೋಡ್ ಶೋದಲ್ಲಿ ಭಾರೀ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page