ನಗರದಲ್ಲಿ ಮತ್ತೆ ಕಾಳಧನ ಬೇಟೆ :೧೫.೧೫ ಲಕ್ಷ ರೂ. ವಶ; ಓರ್ವ ಕಸ್ಟಡಿಗೆ
ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೫.೧೫ ಲಕ್ಷ ರೂ.ವನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ವರದಿ ತಯಾರಿಸಿ, ವಶಪಡಿಸಲಾದ ಹಣದ ಸಹಿತ ಅದನ್ನು ಕಾಸರಗೋಡು ನ್ಯಾಯಾಲ ಯದಲ್ಲಿ ಹಾಜರುಪಡಿಸಿದ್ದಾರೆ. ಈಗ ಹಣ ಸಾಗಾಟಕ್ಕೆ ಸಂಬಂಧಿಸಿ ಅಂಗಡಿಮೊ ಗರಿನ ಕಂಬಾರಿನ ಮೊಹಮ್ಮದ್ ಉನೈಸ್ ಎಂಬಾತ ನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡು ಹೇಳಿಕೆ ದಾಖಲಿಸಿಕೊಂಡ ನಂತರ ಆತನನ್ನು ಬಿಡುಗಡೆ ಗೊಳಿಸಿದ್ದಾರೆ.
ಈ ಹಣಕ್ಕೆ ಸಂಬಂಧಿಸಿದ ಸರಿಯಾದ ದಾಖಲುಪತ್ರಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ದಲ್ಲಿ ಆ ಹಣ ಅದರ ವಾರಿಸುದಾರ ನಿಗೆ ಲಭಿಸಲಿದೆ. ಇಲ್ಲವಾದಲ್ಲಿ ಅದು ಸರಕಾರಿ ಖಜಾನೆಗೆ ಹೋಗಿ ಸೇರಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ಫೆಬ್ರವರಿ ೨೩ರಂದು ಕಾಸರಗೋಡು ರೈಲು ನಿಲ್ದಾಣ ರಸ್ತೆಯಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಏಳೂವರೆ ಲಕ್ಷ ರೂ.ಗಳ ಭಾರತೀಯ ಕರೆನ್ಸಿ ನೋಟುಗಳು ಮತ್ತು ಅಮೇರಿಕನ್ ಡಾಲರ್ ಸೇರಿದಂತೆ ಏಳೂವರೆ ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂ ಡಿದ್ದರು. ಕಾಸರಗೋಡು ಚೌಕಿಯ ಮೊಹಮ್ಮದ್ (೪೨) ಮತ್ತು ಮಲಪ್ಪುರಂ ತಿರೂರಂಗಾಡಿಯ ಸೈನುದ್ದೀನ್ (೪೧)ರಿಂದ ಈ ಹಣ ವಶಪಡಿಸಲಾಗಿತ್ತು. ಆ ಕಾರ್ಯಾಚರಣೆ ನಡೆದ ಬೆನ್ನಲ್ಲೇ ನಿನ್ನೆ ಪೊಲೀಸರು ಅದೇ ರೀತಿಯ ಕಾರ್ಯಾಚರಣೆಯಲ್ಲಿ ಮತ್ತೆ ೧೫.೧೫ ಲಕ್ಷ ರೂ. ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಸರಗೋಡಿಗೆ ಈ ರೀತಿ ಕಾಳಧನ ಹರಿದು ಬರುತ್ತಿರುವುದನ್ನು ಪೊಲೀಸರು ಮಾತ್ರವಲ್ಲ ಚುನಾವಣಾ ಆಯೋಗವೂ ಗಂಭೀರವಾಗಿ ಪರಿಗಣಿಸತೊಡಗಿದೆ.