ನಗರದ ಎರಡು ಅಂಗಡಿಗಳಲ್ಲಿ ಅಗ್ನಿ ಅನಾಹುತ: ಲಕ್ಷಾಂತರ ರೂ.ಗಳ ನಷ್ಟ
ಕಾಸರಗೋಡು: ನಗರದ ಎಂ.ಜಿ. ರಸ್ತೆಯ ಮುಸ್ಲಿಂ ಲೀಗ್ ಕಚೇರಿ ಸಮೀಪದ ಎರಡು ಅಂಗಡಿಗಳಲ್ಲಿ ಇಂದು ಬೆಳಿಗ್ಗೆ ಭಾರೀ ಅಗ್ನಿಅನಾ ಹುತ ಸಂಭವಿಸಿದೆ.
ಎಂ.ಜಿ ರಸ್ತೆಯಿಂದ ಕೆಳಗೆ ಟ್ರಾಫಿಕ್ ಜಂಕ್ಷನ್ಗೆ ಹೋಗುವ ಭಾಗದ ಬಲಗಡೆ ಕಾರ್ಯಾಚರಿಸುತ್ತಿರುವ ನೇಶನಲ್ ನಗರದ ಅಶ್ರಫ್ ಎಂಬ ವರ ಮ್ಯಾಟ್ (ಚಾಪೆ) ಇತ್ಯಾದಿ ಮಾರಾಟ ಮಾಡುವ ಎನ್.ಎ. ಮ್ಯಾಟ್ ಸೆಂಡರ್ ಎಂಬ ಹೆಸರಿನ ಅಂಗಡಿ ಮತ್ತು ಅಲ್ಲೇ ಪಕ್ಕದಲ್ಲಿರುವ ತಳಂಗರೆಯ ಮನಾಫ್ ಎಂಬವರ ಸ್ಯಾನೋ ಎಂಬ ಹೆಸರಿನ ಮೊಬೈಲ್ ಮತ್ತು ವಾಚ್ ಮಾರಾಟ ದಂಗಡಿಗೆ ಇಂದು ಬೆಳಿಗ್ಗೆ ಸುಮಾರು ೯ ಗಂಟೆ ವೇಳೆ ಬೆಂಕಿ ತಗಲಿದೆ. ಬೆಂಕಿ ತಗಲುವ ವೇಳೆ ಎರಡು ಅಂಗಡಿಗಳೂ ತೆರೆದಿರಲಿಲ್ಲ. ಮೊಬೈಲ್ ಮತ್ತು ವಾಚ್ ಮಾರಾಟದಂಗಡಿಗೆ ಬೆಂಕಿ ತಗಲಿರುವು ದರಿಂದಾಗಿ ಸುಮಾರು ಮೂರು ಲಕ್ಷ ರೂ. ತನಕ ನಷ್ಟ ಉಂಟಾಗಿದೆಯೆಂದು ಅದರ ಮಾಲಕ ಮನಾಫ್ ಹೇಳಿದ್ದಾರೆ. ವಾಚ್ ಅಂಗಡಿಗೆ ಸುಮಾರು ೧೨ ಲಕ್ಷ ರೂ.ಗಳ ನಷ್ಟ ಲೆಕ್ಕಹಾಕಲಾಗಿದೆ ಯೆಂದು ಮಾಲಕ ತಿಳಿಸಿದ್ದಾರೆ.
ಕಾಸರಗೋಡು ಅಗ್ನಿಶಾಮಕದಳ ಸಂಭವ ಸ್ಥಳಕ್ಕೆ ತಕ್ಷಣ ಎರಡು ಗಾಡಿಗಳಲ್ಲಿ ಧಾವಿಸಿ ಬಂದು ಬೆಂಕಿ ನಂದಿಸಿದೆ.