ನಗರದ ವ್ಯಾಸ ಮಂಟಪದಲ್ಲಿ ಯಕ್ಷಗಾನ ತರಗತಿ ಆರಂಭ
ಕಾಸರಗೋಡು: ಎಸ್‌ವಿಟಿ ರಸ್ತೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಹಿಮ್ಮೇಳ ಹಾಗೂ ಯಕ್ಷಗಾನ ನಾಟ್ಯ ತರಬೇತಿ ತರಗತಿ ಆರಂಭಿಸಲಾಯಿತು. ಕಾರ್ಯಕ್ರಮ ವನ್ನು ಖ್ಯಾತ ಕಲಾವಿದ ರಾಧಾಕೃಷ್ಣ ನಾವಡ ಮಧೂರು ಉದ್ಘಾಟಿಸಿದರು. ಅಧ್ಯಯನ ಕೇಂದ್ರದ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿಸಿ ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಹಿಮ್ಮೇಳ ಗುರು ರಾಘವ ಬಲ್ಲಾಳ್ ಕಾರಡ್ಕ, ನಾಟ್ಯಗುರು ರಾಕೇಶ್ ರೈ ಅಡ, ಸಂಘದ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹಳ್ಳ, ಕಿಶೋರ್ ಕುಮಾರ್ ಭಾಗವಹಿಸಿ ದರು. ಹಲವರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಶನಿವಾರಗಳಂದು ತರಗತಿ ನಡೆಯಲಿದೆ.