ನಗರಸಭಾ ವ್ಯಾಪ್ತಿಯ ನೌಕರರಿಗೆ 8 ಶೇ. ಮನೆ ಬಾಡಿಗೆ ಭತ್ತೆ ಲಭ್ಯಗೊಳಿಸಬೇಕು-ಎನ್‌ಜಿಒ ಸಂಘ್
ಕಾಸರಗೋಡು: ಸಿವಿಲ್ ಸ್ಟೇಶನ್ ನೌಕರರಿಗೆ ಮಂಜೂರು ಮಾಡಿದ 8 ಶೇ. ಮನೆ ಬಾಡಿಗೆ ಭತ್ತೆಯನ್ನು ಜಿಲ್ಲಾ ಕೇಂದ್ರ ಸೇರಿದ ಕಾಸರಗೋಡು ನಗರಸಭಾ ವ್ಯಾಪ್ತಿಯ ಎಲ್ಲಾ ನೌಕರರಿಗೂ ಮಂಜೂರು ಗೊಳಿಸಬೇಕೆಂದು ಕೇರಳ ಎನ್‌ಜಿಒ ಸಂಘ್ ಕಾಸರಗೋಡು ಜಿಲ್ಲಾ ಸಮಿತಿ ಸರಕಾರಕ್ಕೆ ಆಗ್ರಹಿಸಿದೆ. ಕೇರಳದ ಇತರ ಜಿಲ್ಲೆಗಳಲ್ಲಿ ಇದನ್ನು ಮಂಜೂರು ಮಾಡಿದಾಗ ಕಾಸರಗೋಡಿನಲ್ಲಿ ಹೊರತುಪಡಿಸಿದ್ದು, ಈ ತಾರತಮ್ಯ ನೀತಿಯನ್ನು ಕೊನೆಗೊಳಿಸಬೇಕೆಂದು ಎನ್‌ಜಿಒ ಸಂಘ್ ಆಗ್ರಹಿಸಿದೆ. ಈ ಸವಲತ್ತು ಲಭಿಸಲು ಕಾನೂನು ಹೋರಾಟ ನಡೆಸಲು ಎನ್‌ಜಿಒ ಸಂಘ್ ಸಭೆ ತೀರ್ಮಾನಿಸಿದೆ. ಜಿಲ್ಲಾ ಅಧ್ಯಕ್ಷ ಕೆ. ರಂಜಿತ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಕಾರ್ಯದರ್ಶಿ ವಿಜಯನ್ ಸಿ. ಉದ್ಘಾಟಿಸಿದರು. ರಾಜ್ಯ ಎಕ್ಸಿಕ್ಯೂಟಿವ್ ಸದಸ್ಯ ಪಿ.ಪೀತಾಂಬರನ್, ಸಂತೋಷ್ ಪಿ.ಕೆ., ಆಂಜನೇಯನ್, ರವೀಂದ್ರನ್ ಕೊಟ್ಟೋಡಿ, ತುಳಸೀದರನ್ ಟಿ., ಸುರೇಶ್ ನಾಯ್ಕ್, ದೇವದಾಸ್ ಮಾತನಾಡಿದರು. ಶ್ಯಾಂಪ್ರಸಾದ್ ಸ್ವಾಗತಿಸಿ, ರವಿಕುಮಾರ್ ವಂದಿಸಿದರು.