ನಗ್ನತಾ ಪ್ರದರ್ಶನ: ಆರೋಪಿಗೆ ಶಿಕ್ಷೆ
ಕಾಸರಗೋಡು: ವಿದ್ಯಾರ್ಥಿನಿಯ ಮುಂದೆ ದೋತಿ ಬಿಚ್ಚಿ ನಗ್ನತಾ ಪ್ರದರ್ಶನ ನಡೆಸಿದ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯ ಪೋಕ್ಸೋ ಕಾನೂನು ಪ್ರಕಾರ ಒಂದು ವರ್ಷ ಸಜೆ ಹಾಗೂ ೨೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಪಳ್ಳಿಕ್ಕೆರೆ ಇಲ್ಯಾಸ್ ನಗರದ ಅಬ್ದುಲ್ಲ (೫೪) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿ ದ್ದಲ್ಲಿ ಆರೋಪಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾ ಗಿದೆ ಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೨ ಮಾರ್ಚ್ ೨೭ರಂದು ಬೆಳಿಗ್ಗೆ ಪಳ್ಳಿಕ್ಕೆರೆಯಲ್ಲಿ ಮದ್ರಸಾಕ್ಕೆ ಹೋಗುತ್ತಿದ್ದ ೧೧ ವರ್ಷದ ಬಾಲಕಿಮುಂದೆ ನಗ್ನತಾಪ್ರದರ್ಶನ ನಡೆಸಿದ ದೂರಿನಂತೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು.