ನಡುಗಿದ ಪುತ್ತೂರು: ಯುವಕನ ಅಟ್ಟಾಡಿಸಿ ಕೊಲೆ
ಪುತ್ತೂರು: ಕರ್ನಾಟಕದ ಪುತ್ತೂರು ಪೇಟೆಯ ಹೊರವಲಯ ನೆಹರು ನಗರದಲ್ಲಿ ನಿನ್ನೆ ಮಧ್ಯರಾತ್ರಿ ದುಷ್ಕರ್ಮಿಗಳ ತಂಡವೊಂದು ಯುವಕನನ್ನು ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ. ಖ್ಯಾತ ಹುಲಿವೇಷ ಕುಣಿತ ತಂಡದ ಅಕ್ಷಯ್ ಕಲ್ಲೇಗ (೨೪)ನನ್ನು ಕಡಿದು ಕೊಲೆಗೈಯ್ಯಲಾ ಗಿದೆ. ಅಕ್ಷಯ್ ಕಲ್ಲೇಗ ಸಾರಥ್ಯದಲ್ಲಿ ಟೈಗರ್ಸ್ ಕಲ್ಲೇಗ ಎಂಬ ತಂಡವನ್ನು ಕಟ್ಟಿ ಹುಲಿ ಕುಣಿತದಲ್ಲಿ ಪ್ರಸಿದ್ಧರಾಗಿದ್ದರು.
ಹತ್ಯೆಗೆ ಕಾರಣವೇನು
ಮೂಲಗಳ ಪ್ರಕಾರ ನಿನ್ನೆ ಸಂಜೆ ಅಕ್ಷಯ್ನ ಗೆಳೆಯನೋರ್ವ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅಲ್ಲಿ ೧೮೦೦ ರೂ. ವೆಚ್ಚವಾಗಿತ್ತೆನ್ನಲಾಗಿದೆ. ಅದಕ್ಕೆ ೨೦೦೦ ರೂ. ಬೈಕ್ ಚಲಾಯಿಸಿದಾಗ ವ್ಯಕ್ತಿ ನೀಡಬೇಕೆಂದು ಅಕ್ಷಯ್ ಆಗ್ರಹಿಸಿ ದ್ದಾರೆ. ಈ ವಿಷಯದಲ್ಲಿ ವಾಗ್ವಾದ ಉಂಟಾಗಿತ್ತು. ತಡರಾತ್ರಿ ಅಕ್ಷಯ್ನನ್ನು ಕರೆದು ಮಾತನಾಡಲಿದೆಯೆಂದು ವಿವೇಕಾನಂದ ನಗರಕ್ಕೆ ಬರಲು ಹೇಳಲಾಗಿತ್ತು. ಅದರಂತೆ ಅಲ್ಲಿಗೆ ಬಂದಾಗ ನಾಲ್ಕು ಮಂದಿಯ ತಂಡ ಮಾರಕಾಯುಧಗಳಿಂದ ಆಕ್ರಮಿಸಿತ್ತು. ಇದರಿಂದ ಅಕ್ಷಯ್ ಓಡಿದ್ದು, ತಂಡ ಬೆನ್ನಟ್ಟಿ ಕಡಿದು ಕೊಲೆಗೈದಿದೆ. ಇದೇ ವೇಳೆ ಆರೋಪಿಗಳಲ್ಲಿ ಓರ್ವ ಅಕ್ಷಯ್ ಕಲ್ಲೇಗದ ಹುಲಿ ಕುಣಿತ ತಂಡದಲ್ಲಿದ್ದನೆಂದೂ ಈ ವರ್ಷ ಭಿನ್ನಾಭಿಪ್ರಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾನೆಂದೂ ಇದು ಕೂಡಾ ಹಲ್ಲೆಗೆ ಕಾರಣವಾಗಿರಬಹು ದೆಂದು ಶಂಕಿಸಲಾಗಿದೆ.
ಆರೋಪಿಗಳು ಠಾಣೆಗೆ ಶರಣು
ಕೊಲೆಗೈದ ಬಳಿಕ ಇಬ್ಬರು ಆರೋ ಪಿಗಳು ನಿನ್ನೆ ರಾತ್ರಿಯೇ ಪುತ್ತೂರು ಠಾಣೆಗೆ ಹಾಜರಾಗಿದ್ದರು. ಬನ್ನೂರಿನ ಜೈನರ ಗುರಿ ನಿವಾಸಿಗಳಾದ ಚೇತು ಅಲಿಯಾಸ್ ಚೇತನ್, ಮಂಜು ಯಾನೆ ಮಂಜುನಾಥ ಎಂಬವರು ನಿನ್ನೆ ಠಾಣೆಗೆ ಹಾಜರಾಗಿದ್ದಾರೆ. ಇಂದು ಮುಂಜಾನೆ ಪಡೀಲ್ ನಿವಾಸಿ ಮನೀಶ್ ಮಣಿಯಾಣಿ ಠಾಣೆಗೆ ಹಾಜರಾಗಿದ್ದಾನೆ. ಇನ್ನೋರ್ವ ಆರೋಪಿ ಕೇಶವ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆಯಲು ಬಾಕಿ ಇದೆ. ಸ್ಥಳಕ್ಕೆ ಪೊಲೀಸರು ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ. ಮೃತದೇಹದ ಮಹಜರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ತನಿಖೆಯಿಂದಷ್ಟೇ ಕೊಲೆ ಕೃತ್ಯದ ನಿಖರ ಕಾರಣ ಲಭಿಸಲಿದೆ.