ನವಕೇರಳ ಸಭೆಗಾಗಿ ಶಾಲಾ ಆವರಣ ಗೋಡೆ ನಾಶ
ಕೊಚ್ಚಿ : ನವಕೇರಳ ಸಭೆಯ ಕಾರ್ಯಕ್ರಮ ನಡೆಯುವ ಶಾಲೆಗಳ ಆವರಣಗೋಡೆ ಮುರಿಯುವ ಕೆಲಸ ಈಗಲೂ ಮುಂದುವರಿಯುತ್ತಿರು ವುದಾಗಿ ದೂರಲಾಗಿದೆ. ನವಕೇರಳ ಸಭೆಗಾಗಿ ಎರ್ನಾಕುಳಂ ಪೆರುಂಬಾವೂರಿನ ಸರಕಾರಿ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯ ಆವರಣ ಗೋಡೆಯ ಒಂದು ಭಾಗವನ್ನು ಇದೀಗ ಮುರಿಯಲಾಗಿದೆ. ನವಕೇರಳ ಸಭೆಯಲ್ಲಿ ಭಾಗವಹಿಸುವ ಜನರಿಗೆ ದಾರಿ ಸೌಕರ್ಯ ಒದಗಿಸಲು ಆವರಣಗೋಡೆ ಯನ್ನು ಮುರಿಯುತ್ತಿರುವುದಾಗಿ ಆರೋಪವುಂಟಾಗಿದೆ. ವೇದಿಕೆಗೆ ಇರುವ ಪ್ರಧಾನ ದ್ವಾರದ ಹೊರತು ವೇದಿಕೆಯ ಸಮೀಪಕ್ಕೆ ತಲುಪಲು ಸಾಧ್ಯವಾಗುವ ರೀತಿಯಲ್ಲಿ ಶಾಲಾ ಮೈದಾನದ ಮತ್ತೊಂದು ಭಾಗದಲ್ಲಿರುವ ಗೋಡೆಯನ್ನು ಮುರಿಯಲಾಗಿದೆ.