ನವಕೇರಳ ಸಭೆಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳಿಸುವಿಕೆಗೆ ನಿಷೇಧ ಹೇರಿ ಹೈಕೋರ್ಟ್ ತೀರ್ಪು
ಕೊಚ್ಚಿ: ಮುಖ್ಯಮಂತ್ರಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ನವಕೇರಳ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಪಾಲ್ಗೊಳಿಸುವಂತೆ ಮಾಡುವ ಕ್ರಮಕ್ಕೆ ರಾಜ್ಯ ಹೈಕೋರ್ಟ್ನ ನ್ಯಾಯ ಮೂರ್ತಿ ದೇವನ್ ರಾಮಚಂದ್ರನ್ ಅವರು ನಿಷೇಧ ಹೇರಿ ಆದೇಶ ಜ್ಯಾರಿಗೊಳಿಸಿದ್ದಾರೆ.
ಈ ಯಾತ್ರೆಗೆ ಶಾಲೆಗಳಿಂದ ವಿದ್ಯಾ ರ್ಥಿಗಳನ್ನು ಕಳುಹಿಸಿಕೊಡುವುದಕ್ಕೂ ನ್ಯಾಯಾಲಯ ನಿಷೇಧ ಹೇರಿದೆ.
ಇಂತಹ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಭಾಗಿಯನ್ನಾಗಿಸಲು ಶಿಕ್ಷಣ ಕಾನೂನು ಆಸ್ಪದ ನೀಡುತ್ತಿಲ್ಲ. ಆದರೆ ಇದನ್ನು ಉಲ್ಲಂಘಿಸಿ ಶಿಕ್ಷಣ ಉಪ ನಿರ್ದೇಶಕರು ಸುತ್ತೋಲೆ ಜ್ಯಾರಿಗೊಳಿಸಿದ್ದಾರೆ ಎಂಬುದು, ಈ ಬಗ್ಗೆ ನಡೆಸಲಾದ ಪ್ರಾಥಮಿಕ ಪರಿಶೀಲನೆಯಲ್ಲಿ ವ್ಯಕ್ತವಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ನಮ್ಮ ಸ್ವಂತ ಮಕ್ಕಳಾದರೂ ಅವರನ್ನು ಬಳಸಿ ಇದನ್ನು ನಡೆಸಬಹುದೇ ಎಂದೂ ನ್ಯಾಯಾಲಯ ಪ್ರಶ್ನಿಸಿದೆ. ಹೀಗೆ ಮಕ್ಕಳನ್ನು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಬೇಕೆಂದು ಯಾವ ಸಚಿವರುಗಳಿಗೂ ಆದೇಶ ನೀಡಲು ಸಾಧ್ಯವಾಗದು ಎಂದು ನ್ಯಾಯಾಲಯ ಹೇಳಿದೆ. ನವಕೇರಳ ಸಭೆಗೆ ವಿದ್ಯಾರ್ಥಿಗಳನ್ನು ಪಾಲ್ಗೊಳ್ಳಿಸುವಂತೆ ಮಾಡುವ ಕ್ರಮವನ್ನು ಪ್ರಶ್ನಿಸಿ ಎಂ.ಎಸ್.ಎಫ್ ರಾಜ್ಯ ಅಧ್ಯಕ್ಷ ಪಿ.ಕೆ. ನವಾಜ್ ಅವರು ಕೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಕೊನೆಗೆ ಈ ತೀರ್ಪು ನೀಡಿದೆ.