ನವಕೇರಳ ಸಭೆ ಭಾರೀ ಭದ್ರತೆಯೊಂದಿಗೆ ಇಂದು ಸಮಾಪ್ತಿ

ತಿರುವನಂತಪುರ: ಪೈವಳಿಕೆಯಿಂದ ಆರಂಭಗೊಂಡ ನವಕೇರಳ ಸಭೆ ಇಂದು ತಿರುವನಂತಪುರದಲ್ಲಿ ಸಮಾಪ್ತಿ ಗೊಳ್ಳಲಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮೈದಾನದಲ್ಲಿ ನವೆಂಬರ್ ೧೮ರಂದು ನವಕೇರಳ ಸಭೆ ಆರಂಭಗೊಂಡಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಎಲ್ಲಾ ಸಚಿವರುಗಳು ಭಾಗವಹಿಸಿದ ನವಕೇರಳ ಯಾತ್ರೆ ರಾಜ್ಯದ ೧೪೦ ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಿ ಇಂದು ಕೊನೆಯ ಕಾರ್ಯಕ್ರಮ ತಿರುವನಂತ ಪುರದಲ್ಲಿ ನಡೆಯಲಿದೆ. ಪ್ರತೀ ಮಂಡಲಗಳಲ್ಲಿ ನಡೆದ ಕಾರ್ಯಕ್ರಮ ವೇಳೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಸಾರ್ವಜನಿಕರಿಂದ ಸಾವಿರಾರು ಅರ್ಜಿಗಳು  ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಅರ್ಜಿಗಳ ಪರಿಶೀಲನೆ ಸಮರ್ಪಕ ರೀತಿಯಲ್ಲಿ ನಡೆಯು ತ್ತಿಲ್ಲವೆಂಬ ಆರೋಪವೂ ಕೇಳಿ ಬರುತ್ತಿದೆ.

ಇದೇ ಸಂದರ್ಭದಲ್ಲಿ ನವಕೇರಳ ಸಭೆ ವಿರುದ್ಧ ಯೂತ್ ಕಾಂಗ್ರೆಸ್ ಪ್ರತಿಭಟನಾ ರಂಗಕ್ಕೆ ಇಳಿದಿದ್ದು, ಇದು ವ್ಯಾಪಕ ಸಂಘರ್ಷಕ್ಕೂ ಕಾರಣವಾಗಿತ್ತು. ಮುಖ್ಯಮಂತ್ರಿ ಹಾಗೂ ಸಚಿವರು ಸಂಚರಿಸಿದ ವಿಶೇಷ ಬಸ್‌ಗೆ ರಾಜ್ಯದ ಹಲವೆಡೆಗಳಲ್ಲಿ ಕರಿ ಪತಾಕೆ ಪ್ರದರ್ಶಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಇದು ಹಲವೆಡೆಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿತ್ತು. ಕರಿಪತಾಕೆ ಪ್ರದರ್ಶಿಸಿದವರನ್ನು ಪೊಲೀಸರು ಹಾಗೂ ಡಿವೈಎಫ್‌ಐ ಕಾರ್ಯಕರ್ತರು ಹಲ್ಲೆಗೈದಿದ್ದು. ಇದು ಕೂಡಾ ಭಾರೀ ವಿವಾದಕ್ಕೆ ಕಾರಣವಾಗಿದೆ. ಯಾತ್ರೆಯ ಕೊನೆಯ ದಿನವಾದ ಇಂದು ಕೂಡಾ ಪ್ರತಿಭಟನೆ ನಡೆಯಲಿರುವ ಸಾಧ್ಯತೆಯನ್ನು ಪರಿಗಣಿಸಿ ಭಾರೀ ಭದ್ರತೆ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page