ನವಕೇರಳ ಸಭೆ:  ರಾಜ್ಯದಾದ್ಯಂತ ಒಟ್ಟು ಲಭಿಸಿದ್ದು ೬,೧೨,೧೬೭ ದೂರುಗಳು

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರು ನಡೆಸಿದ ನವಕೇರಳ ಸಭೆಯಲ್ಲಿ ಇದುವರೆಗೆ ಒಟ್ಟು ೬,೨೧,೧೬೭ ದೂರುಗಳು ಲಭಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಆದರೆ ಲಭಿಸಿದ ದೂರುಗಳ ಪೈಕಿ ಎಷ್ಟಕ್ಕೆ ತೀರ್ಪು ಕಲ್ಪಿಸಲಾಗಿದೆಯೆಂದು ಸರಕಾರ ಸ್ಪಷ್ಟಪಡಿಸಿಲ್ಲ.

ಅತೀ ಹೆಚ್ಚು ದೂರುಗಳು ಲಭಿಸಿರುವುದು ಮಲಪ್ಪುರಂ ಜಿಲ್ಲೆಯಿಂದಾಗಿದೆ. ಮಲಪ್ಪುರಂನಿಂದ ೮೧೩೫೪ ದೂರುಗಳು, ಪಾಲಕ್ಕಾಡ್‌ನಿಂದ ೬೧೨೩೪, ಕೊಲ್ಲಂನಿಂದ ೫೦೯೩೮, ಪತ್ತನಂತಿಟ್ಟದಿಂದ ೨೩೬೧೦, ಆಲಪುಳದಿಂದ ೫೩೦೪೪, ತೃಶೂರಿನಿಂದ ೫೪೨೬೦, ಕೋಟ್ಟಯಂನಿಂದ ೪೨೬೫೬, ಇಡುಕ್ಕಿಯಿಂದ ೪೨೨೩೪, ಕಲ್ಲಿಕೋಟೆಯಿಂದ ೪೫೮೯೭, ಕಣ್ಣೂರಿನಿಂದ ೨೮೮೦೩, ಕಾಸರಗೋಡಿನಿಂದ ೧೪೭೦೪, ವಯನಾಡ್‌ನಿಂದ ೨೦೩೮೮ ದೂರುಗಳು ಲಭಿಸಿದೆಯೆಂದು ಸರಕಾರದ ಲೆಕ್ಕಾಚಾರದಲ್ಲಿವೆ. ಹಲವು ಜಿಲ್ಲೆಗಳಲ್ಲಿ ದೂರು ಲಭಿಸಿದ ಮೊದಲ ವಾರಗಳಲ್ಲಿ ಪರಿಗಣಿಸಿ ತೀರ್ಪು ಕಲ್ಪಿಸಲಾದ ದೂರುಗಳು ಅತ್ಯಲ್ಪವೇ ಆಗಿತ್ತು. ಕೆಲವು ದೂರುಗಳಿಗೆ ಹಲವು ರೀತಿಯ ಕಾನೂನು ವ್ಯವಸ್ಥೆಗಳನ್ನು ಅನುಸರಿಸಿ ತೀರ್ಪು ಕಲ್ಪಿಸಬೇಕಾಗಿದೆ ಎಂದು ಸರಕಾರ ತಿಳಿಸುತ್ತಿದೆ. ಅದ್ದರಿಂದ ಲಭಿಸಿದ ದೂರುಗಳನ್ನು ಪರಿಹರಿಸಲು ಪ್ರತೀ ಜಿಲ್ಲೆಗಳಲ್ಲೂ ಸ್ಪೆಶಲ್ ಆಫೀಸರ್‌ಗಳನ್ನು ನೇಮಿಸಲು ಸರಕಾರ ಪರಿಗಣಿಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page