ನಾಟೆಕಲ್ಲಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
ಮುಳ್ಳೇರಿಯ: ಬೆಳ್ಳೂರು ನಾಟೆಕಲ್ಲು ಶ್ರೀ ಮಾಣಿಕ್ಯ ಬಾಲಗೋಕುಲದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಈ ತಿಂಗಳ 26ರಂದು ನಾಟೆಕಲ್ಲು ಶ್ರೀ ಅಯ್ಯಪ್ಪ ಭಜನಾಮಂದಿರ ಪರಿಸರದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಡಾ. ರವಿಪ್ರಸಾದ್ ಶಂಕದಮೂಲೆ ಉದ್ಘಾಟಿಸುವರು. 9.15ಕ್ಕೆ ಚಂದ್ರಶೇಖರ ಆಚಾರ್ಯ ಧ್ವಜಾರೋಹಣ ನಡೆಸುವರು. 9.30ರಿಂದ ಬಾಲಗೋಕುಲದ ಮಕ್ಕಳಿಗೆ ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 1.30ಕ್ಕೆ ಭೋಜನ, ಅಪರಾಹ್ನ 3 ಗಂಟೆಗೆ ಶೋಭಾಯಾತ್ರೆ ನಡೆಯಲಿದೆ. ೪ಕ್ಕೆ ಸಮಾರೋಪ ಸಮಾರಂಭದಲ್ಲಿ ಬಾಲಗೋಕುಲದ ರಕ್ಷಾಧಿಕಾರಿ ಸುಂದರ್ರಾಜ್ ರೈ ಅಧ್ಯಕ್ಷತೆ ವಹಿಸುವರು. ಬಾಲಗೋಕುಲ ಕಾಞಂಗಾಡ್ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕೋಡೋತ್ ಧಾರ್ಮಿಕ ಉಪನ್ಯಾಸ ನೀಡುವರು.
ಆರ್ಎಸ್ಎಸ್ ಬೆಳ್ಳೂರು ಮಂಡಲ ಕಾರ್ಯವಾಹ್ ಯೋಗೀಶ್ ಆಚಾರ್ಯ ನಾಕೂರು, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಮೊದಲಾದವರು ಉಪಸ್ಥಿತರಿರುವರು.