ನಾಪತ್ತೆಯಾಗಿದ್ದ ಬಾಲಕಿ ಉಡುಪಿಯಿಂದ ಪತ್ತೆ
ಕುಂಬಳೆ: ನಾಪತ್ತೆಯಾಗಿದ್ದ ೧೭ರ ಹರಯದ ಬಾಲಕಿಯನ್ನು ಉಡುಪಿಯಿಂದ ಪತ್ತೆಹಚ್ಚಲಾಗಿದೆ. ಚೇವಾರು ಬಳಿಯ ನಿವಾಸಿ ೧೭ರ ಬಾಲಕಿ ಕಳೆದ ೧೫ರಂದು ಬೆಳಿಗ್ಗೆ ೧೧ ಗಂಟೆಗೆ ಮನೆಯಿಂದ ಹೊರಟಿದ್ದು ಆ ಬಳಿಕ ಹಿಂತಿರುಗಿರಲಿಲ್ಲ. ಈ ಹಿನ್ನೆಲೆ ಯಲ್ಲಿ ಚಿಕ್ಕಪ್ಪ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ ಉಡುಪಿಯಲ್ಲಿ ಈಕೆ ನಿನ್ನೆ ಪತ್ತೆಯಾಗಿದ್ದು, ಈಕೆಯನ್ನು ಊರಿಗೆ ಕರೆತರಲಾಗಿದೆ.