ನಾಪತ್ತೆಯಾಗಿದ್ದ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ನಾಪತ್ತೆಯಾಗಿದ್ದ ವಿದ್ಯಾರ್ಥಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ತೆಕ್ಕಿಲ್ ಚಟ್ಟಂಚಾಲ್ ಪಾದೂರು ಎಸ್.ಸಿ. ಕಾಲನಿಯ ನಿವಾಸಿ ಬೇತೂರು ಪಾರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಟೆಂಡರ್ ಚಂದ್ರನ್- ಎಂ. ಶ್ಯಾಮಲ ದಂಪತಿಯ ಪುತ್ರ ಪಿ. ಧನುಷ್(೧೯) ಸಾನ್ನಪ್ಪಿದ ಯುವಕ.
ಗುರುವಾರ ಸಂಜೆ ೪.೩೦ರಿಂದ ಧನುಷ್ ನಾಪತ್ತೆಯಾಗಿರುವುದಾಗಿ ಆತನ ತಾಯಿ ಮೇಲ್ಪರಂಬ ಪೊಲೀ ಸರಿಗೆ ದೂರು ನೀಡಿದ್ದರು. ಆ ಬಗ್ಗೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಶೋಧ ಆರಂಭಿಸಿರು ವಂತೆಯೇ ಮನೆ ಹಿಂಭಾಗದ ಹಿತ್ತಿಲ ಮರವೊಂದಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಧನುಷ್ನನ್ನು ನಿನ್ನೆ ಪತ್ತೆಹಚ್ಚಲಾಗಿದೆ. ಚಂಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ಟು ಉತ್ತೀರ್ಣನಾಗಿದ್ದ ಧನುಷ್ ಬಳಿಕ ವಿದ್ಯಾನಗರ ಸರಕಾರಿ ಐಟಿಐ ಯಲ್ಲಿ ಎರಡು ವರ್ಷದ ಇಲೆಕ್ಟ್ರೀಷಿ ಯನ್ ಕೋರ್ಸ್ ಪೂರ್ತೀಕರಿಸಿದ್ದನು. ಅನಂತರ ಚೆನ್ನೈಯಲ್ಲಿ ತರಬೇತಿಗಾಗಿ ಹೋಗಿದ್ದನು. ಅಲ್ಲಿ ತಿನ್ನಲು ಸರಿಯಾಗಿ ಆಹಾರ ಮತ್ತು ನೀರು ಲಭಿಸು ತ್ತಿರಲಿಲ್ಲವೆಂದು ಹೇಳಿ ಕಳೆದ ತಿಂಗಳು ೧೭ರಂದು ಆತ ಅಲ್ಲಿಂದ ಮನೆಗೆ ಹಿಂತಿರುಗಿದ್ದನೆಂದು, ಪೊಲೀಸರಲ್ಲಿ ನೀಡಿರುವ ಹೇಳಿಕೆಯಲ್ಲಿ ಧನುಷ್ನ ತಾಯಿ ತಿಳಿಸಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಸತೊಡಗಿದ್ದಾರೆ. ಧನುಷ್ನ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಮೃತನು ಹೆತ್ತವರ ಹೊರತಾಗಿ ಸಹೋದರರಾದ ವಿಷ್ಣು, ಜಿಷ್ಣು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.