ನಾಪತ್ತೆಯಾಗಿದ್ದ ವ್ಯಕ್ತಿ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೂಲತಃ ಮಂಗಳೂರು ಬಜ್ಪೆ ನಿವಾಸಿಯೂ ಬದಿಯಡ್ಕ ಸಮೀಪ ಕಾಡಮನೆ ಮಾಡತ್ತಡ್ಕದಲ್ಲಿ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ಕೃಷ್ಣ ನಾಯ್ಕ್ (65) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಬದಿಯಡ್ಕ ಪರಿಸರ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ತಿಂಗಳ ೧೫ರಂದು ಕೆಲಸಕ್ಕೆಂದು ಹೋದ ಕೃಷ್ಣ ನಾಯ್ಕ್ ಮರಳಿ ಬಂದಿರಲಿಲ್ಲ. ಇದರಿಂದ ಸಂಬಂಧಿಕರು ಹುಡುಕಾಡುತ್ತಿದ್ದಾಗ ನಿನ್ನೆ ಸಂಜೆ ಮನೆ ಸಮೀಪದ ಕಾಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದೃಷ್ಟಿದೋಷವಿದ್ದ ಇವರು ಹೃದಯ ಸಂಬಂಧ ರೋಗದಿಂದ ಬಳಲು ತ್ತಿದ್ದರೆನ್ನಲಾಗಿದೆ.
ಸಾವಿಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕೃಷ್ಣ ನಾಯ್ಕ್‌ರ ಪತ್ನಿ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಮೃತರು ಸಹೋದರ ಮಾಲಿಂಗ ನಾಯ್ಕ್, ಸಹೋದರಿ ಲಕ್ಷ್ಮಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.