ನಾಪತ್ತೆಯಾದ ವ್ಯಕ್ತಿ ಪತ್ತೆ
ಕುಂಬಳೆ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಯ್ಕಾಪು ನಿವಾಸಿ ದುರೈ (೮೯) ಎಂಬವರು ಇಂದು ಬೆಳಿಗ್ಗೆ ಕುಂಬಳೆಯಲ್ಲಿ ಪತ್ತೆಯಾಗಿದ್ದು, ಅವರನ್ನು ಪೇಟೆಯ್ಲ ಆಟೋ ಚಾಲಕರು ಮನೆಗೆ ತಲುಪಿಸಿ ದ್ದಾರೆ.
ಈ ತಿಂಗಳ ೩ರಿಂದ ದುರೈ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ಲಕ್ಷ್ಮಿ ಕುಂಬಳೆ ಪೊಲೀಸ ರಿಗೆ ದೂರು ನೀಡಿದ್ದರು. ಅವರಿ ಗಾಗಿ ಶೋಧ ನಡೆಸುತ್ತಿದ್ದಂತೆ ಇಂದು ಬೆಳಿಗ್ಗೆ ಅವರು ಕುಂಬಳೆ ಪೇಟೆಯಲ್ಲಿ ಪತ್ತೆಯಾಗಿದ್ದಾರೆ.
ಮೂಲತಃ ತಮಿಳುನಾಡು ನಿವಾಸಿಯಾದ ದುರೈ ನಾಯ್ಕಾ ಪುನಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಾರೆ.