ನಾಪತ್ತೆಯಾದ ಶಿಕ್ಷಕಿಯ ಮೃತದೇಹ ಪತ್ತೆ
ಸುಳ್ಯ: ಶಾಲೆಗೆ ಹೋಗಿ ಬರುತ್ತೇನೆಂದು ತಿಳಿಸಿ ತೆರಳಿದ್ದ ಶಿಕ್ಷಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಮೃತದೇಹವನ್ನು ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಮಂಡ್ಯ ಶ್ರೀರಂಗಪಟ್ಟಣ ಮೇಲುಕೋಟೆಯಲ್ಲಿ ಘಟನೆ ನಡೆದಿದ್ದು, ಇಲ್ಲಿನ ಪಾಂಡವಪುರ ಮಾಣಿಕ್ಯ ಹಳ್ಳಿ ನಿವಾಸಿ ದೀಪಿಕ (೨೮) ಮೃತಪಟ್ಟ ಶಿಕ್ಷಕಿಯಾಗಿದ್ದಾರೆ.
ಇವರನ್ನು ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತುಹಾಕಿರಬೇಕೆಂದು ಶಂಕಿಸಲಾಗಿದೆ. ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು.