ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಾಳೆಯಿಂದ
ನಾರಂಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ವರ್ಷಾವಧಿ ಉತ್ಸವ ನಾಳೆಯಿಂದ 16ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ನಾಳೆ ಬೆಳಿಗ್ಗೆ 7ಕ್ಕೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. 8.15ರಿಂದ 8.45ರ ಮಧ್ಯೆ ಉಗ್ರಾಣ ಮುಹೂರ್ತ ನಡೆಯಲಿದೆ. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ದೀಪ ಪ್ರಜ್ವಲನೆ ನಡೆಸುವರು. 10ಕ್ಕೆ ಮವ್ವಾರು ಶ್ರೀ ಕೃಷ್ಣ ಭಜನಾ ಮಂದಿರದಿAದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಟು ಕ್ಷೇತ್ರಕ್ಕೆ ಆಗಮಿಸಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 4.30ಕ್ಕೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. 6ಕ್ಕೆ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ.
ಕ್ಷೇತ್ರ ಮುಂಭಾಗದ ಭಜನಮಂಟಪದಲ್ಲಿ ಮಧ್ಯಾಹ್ನ 12ರಿಂದ ಶ್ರೀಮದ್ ಭಗವದ್ಗೀತಾ ಪಾರಾಯಣ, ಸಂಜೆ 6ಕ್ಕೆ ಭಜನೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಉಮಾಮಹೇಶ್ವರ ಸಾಂಸ್ಕೃತಿಕ ವೇದಿಕೆ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ನಿರ್ವಹಿಸುವರು. ವೇದಿಕೆಯಲ್ಲಿ 10.30ರಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 1.30ರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ 7ರಿಂದ ಶಾಸ್ತ್ರೀಯ ಸಂಗೀತ, 8.45ರಿಂದ ಕರೋಕೆ ಭಕ್ತಿಗಾನ ಮೇಳ, ಮಿಮಿಕ್ರಿ ಏಕವ್ಯಕ್ತಿ ಪ್ರದರ್ಶನ ನಡೆಯಲಿರುವುದು.
3ರಂದು ಮುಂಜಾನೆ 5.30ಕ್ಕೆ ವಿವಿಧ ವೈದಿಕ ಕಾರ್ಯಕ್ರಮಗಳು, 8ರಿಂದ ವಿವಿಧ ಭಜನಾ ಸಂಘಗಳಿAದ ಭಜನೆ, ಸಂಜೆ 6ಕ್ಕೆ ಕುಣಿತ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ 10.30ಕ್ಕೆ ಧಾರ್ಮಿಕ ಸಭೆ, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ಸಭಾ ವೇದಿಕೆ ಉದ್ಘಾಟನೆ ಮತ್ತು ಆಶೀರ್ವಚನ, ಕ್ಷೇತ್ರ ಬ್ರಹ್ಮಕಲಶಾಭಿಷೇಕ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ದೈವಜ್ಞ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಉಪಸ್ಥಿತರಿರುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಉಪನ್ಯಾಸ ನೀಡುವರು. ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸುವರು.
ಅಪರಾಹ್ನ 2.15ರಿಂದಿ ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, ಸಂಜೆ 6ಕ್ಕೆ ಪಾವಂಜೆ ಮೇಳದಿಂದ ಸತೀಶ್ ಶೆಟ್ಟಿ ಪಟ್ಲ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ. 4ರಂದು ಬೆಳಿಗ್ಗೆ 6 ಹಾಗೂ ರಾತ್ರಿ 7ಕ್ಕೆ ವಿವಿಧ ವೈದಿಕ ಕಾರ್ಯಕ್ರಮ, ಬೆಳಿಗ್ಗೆ 8ರಿಂದ ವಿವಿಧ ತಂಡಗಳಿAದ ಭಜನೆ, 11.30ಕ್ಕೆ ನಾರಾಯಣೀಯಂ ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 9.30ಕ್ಕೆ ಹರಿಕಥೆ, ಮಧ್ಯಾಹ್ನ 1ರಿಂದ ಯಕ್ಷಗಾನ ತಾಳಮದ್ದಳೆ, 4ಕ್ಕೆ ಕೈಕೊಟ್ಟಿ ಕಳಿ ಮತ್ತು ಸಮೂಹ ನೃತ್ಯ, 5.30ಕ್ಕೆ ಸಂಗೀತ ದಾಸವಾಣಿ, ರಾತ್ರಿ 8ಕ್ಕೆ ನೃತ್ಯ ಸಂಭ್ರಮ, 5ರಂದು ಬೆಳಿಗ್ಗೆ 6, ರಾತ್ರಿ 7ಕ್ಕೆ ವಿವಿಧ ವೈದಿಕ ಕಾರ್ಯಕ್ರಮ, ಬೆಳಿಗ್ಗೆ 8ರಿಂದ ಭಜನೆ, 9.30ಕ್ಕೆ ಭಕ್ತಿ ಸಂಗೀತ, 11ರಿಂದ ಸಾಹಿತ್ಯ ಗಾನ ನೃತ್ಯ ವೈಭವ, 12.35ರಿಂದ ಕೈಕೊಟ್ಟಿ ಕಳಿ, ಅಪರಾಹ್ನ 1ರಿಂದಿ ಶಾಸ್ತ್ರೀಯ ಸಂಗೀತ, ಯಕ್ಷಗಾನ ತಾಳಮದ್ದಳೆ, ಸಂಜೆ 5ರಿಂದ ಹರಿಕಥಾ ಸತ್ಸಂಗ, ಜಾನಪದ ನೃತ್ಯ, ರಾತ್ರಿ 9ಕ್ಕೆ ಯಕ್ಷಗಾನ ಬಯಲಾಟ, 6ರಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.30ರಿಂದ ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, 3 ಗಂಟೆಗೆ ಹರಿಕಥಾ ಸತ್ಸಂಗ, 5 ಗಂಟೆಗೆ ಶಾಸ್ತ್ರೀಯ ಸಂಗೀತ ನಡೆಯಲಿದೆ.
7ರಂದು ಮುಂಜಾನೆ 5ರಿಂದ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾ ಪಾಣಿ, 9.55ರಿಂದ ಶ್ರೀ ಉಮಾ ಮಹೇಶ್ವರ ಮತ್ತು ಪರಿವಾರ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ಸಂಜೆ 7ಕ್ಕೆ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8ರಿಂದ ವಿವಿಧ ತಂಡಗಳಿAದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸುವರು. ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡವರ್ಮ ರಾಜ ಯಾನೆ ರಾಮಂತರಸು ಉಪಸ್ಥಿತರಿರುವರು. ಆರ್ಎಸ್ಎಸ್ ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಹಲವರು ಭಾಗವಹಿಸುವರು. ಶಾಸ್ತ್ರೀಯ ಸಂಗೀತ, ತಿರುವಾದಿರ, ಹರಿಕಥಾ ಸತ್ಸಂಗ ನಡೆಯಲಿದೆ.
8ರಂದು ಬೆಳಿಗ್ಗೆ 6ಕ್ಕೆ ವೈದಿಕ ಕಾರ್ಯಕ್ರಮ, 8ರಿಂದ ಭಜನೆ, 9.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಭರತನಾಟ್ಯ, ಫ್ಯೂಷನ್ ಡ್ಯಾನ್ಸ್, ನೃತ್ಯ ವೈವಿದ್ಯ ನಡೆಯಲಿದೆ. 9ರಂದು ಬೆಳಿಗ್ಗೆ 6ರಿಂದ ವೈದಿಕ ಕಾರ್ಯಕ್ರಮ, 8ರಿಂದ ಭಜನೆ, 10 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಕ್ಷೇತ್ರ ಮಾತೃಮಂಡಳಿ ಅಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸುವರು. ಪವಿತ್ರಪಾಣಿ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ ಉಬ್ರಂಗಳ ಉಪಸ್ಥಿತರಿರುವರು. ಉಪನ್ಯಾಸಕಿ ಅಕ್ಷಯ ಗೋಕಲೆ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡುವರು. ಹಲವರು ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತಿರಸಮಂಜರಿ, ಯಕ್ಷಗಾನ ಬಯಲಾಟ, ಯೋಗನೃತ್ಯ, ಭರತನಾಟ್ಯ ಪ್ರದರ್ಶನಗೊಳ್ಳಲಿದೆ.
10ರಂದು ಬೆಳಿಗ್ಗೆ 6ಕ್ಕೆ ಸಹಸ್ರ ಬ್ರಹ್ಮಕಲಶಾಭಿಷೇಕ, ರಾತ್ರಿ 7ಕ್ಕೆ ಶ್ರೀ ದೇವರ ಉತ್ಸವ ಬಲಿ ನಡೆಯಲಿದೆ. 10.30ಕ್ಕೆ ಭಕ್ತಿಸಂಗೀತ, ಅಪರಾಹ್ನ 2 ಗಂಟೆಗೆ ಜರಗುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಅಧ್ಯಕ್ಷತೆ ವಹಿಸುವರು. ಮಾಯಿಪ್ಪಾಡಿ ಅರಮನೆಯ ರಾಜೇಂದ್ರ ರಾವ್, ಶಿಲ್ಪಿ ರಮೇಶ್ ಕಾರಂತ ಉಪಸ್ಥಿತರಿರುವರು. ಆರ್ಎಸ್ಎಸ್ ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕೆ.ಕೆ.ಪುರಂ ಧಾರ್ಮಿಕ ಉಪನ್ಯಾಸ ನೀಡುವರು. ಹಲವರು ಭಾಗವಹಿಸುವರು. ರಾತ್ರಿ 9ಕ್ಕೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. 11ರಿಂದ 16ರವರೆಗೆ ವಾರ್ಷಿಕ ಉತ್ಸವ ಜರಗಲಿದ್ದು, ಇದರಂಗವಾಗಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ವೈದಿಕ ಕಾರ್ಯಕ್ರಮಗಳು ಜರಗಲಿದೆ.