ನಾಲ್ಕನೇ ಲೋಕ ಕೇರಳ ಸಭೆ ಜೂನ್ 13ರಿಂದ ತಿರುವನಂತಪುರದಲ್ಲಿ
ತಿರುವನಂತಪುರ: ಜಗತ್ತಿನಾ ದ್ಯಂತ ಅದಿವಾಸಿ ಕೇರಳೀಯರ ಸಂಗಮ ವೇದಿಕೆಯಾದ ಲೋಕ ಕೇರಳ ಸಭೆಯ ನಾಲ್ಕನೇ ಸಮ್ಮೇಳನ ಜೂನ್ 13ರಿಂದ 15ರವರೆಗೆ ತಿರುವನಂತ ಪುರದಲ್ಲಿ ನಡೆಯಲಿದೆ. ರಾಜ್ಯ ವಿಧಾನಸಭೆಯ ಆರ್. ಶಂಕರನಾ ರಾಯಣನ್ ತಂಬಿ ಹಾಲ್‌ನಲ್ಲಿ ನಡೆಯುವ ಸಮ್ಮೇಳನದಲ್ಲಿ ನೂರರಷ್ಟು ದೇಶಗಳ ಪ್ರತಿನಿಧಿಗಳ ಸಹಿತ 315 ಮಂದಿ ಭಾಗವಹಿಸುವರು. ವಿಧಾನಸಭಾ ಸದಸ್ಯರು, ಕೇರಳದ ಸಂಸದರು, ಭಾರತೀಯ ಪೌರತ್ವವುಳ್ಳ ಅನಿವಾಸಿ ಕೇರಳೀಯರು, ಭಾರತದ ಹೊರಗಿರುವವರು, ಭಾರತದ ಇತರ ರಾಜ್ಯಗಳಲ್ಲಿರುವವರು, ಮರಳಿ ಬಂದ ಅನಿವಾಸಿಗಳು ಮೊದಲಾದವರು ಇದರಲ್ಲಿ ಒಳಗೊಳ್ಳುವರು.