ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ನಾಳೆ: ಮಿಜೋರಾಂನಲ್ಲಿ ಸೋಮವಾರ

ದಿಲ್ಲಿ: ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ನಾಳೆ ನಡೆಯಲಿದೆ.

ಮಧ್ಯಪ್ರದೇಶದಲ್ಲಿ  ೨೩೦ ಸೀಟುಗಳು,  ರಾಜಸ್ಥಾನದಲ್ಲಿ ೧೯೯, ಛತ್ತೀಸ್‌ಗಢದಲ್ಲಿ ೯೦, ತೆಲಂಗಾನದಲ್ಲಿ ೧೯೯  ಸೀಟುಗಳಿಗೆ ನಡೆದ ಚುನಾವಣೆಯ  ಮತ ಎಣಿಕೆ ನಾಳೆ  ಬೆಳಿಗ್ಗೆ ೮ ಗಂಟೆಗೆ ಆರಂ ಭಗೊಳ್ಳಲಿದೆ. ಮಧ್ಯಾಹ್ನದೊಳಗೆ ಪೂರ್ಣ ಫಲಿತಾಂಶ ಪ್ರಕಟಗೊಳ್ಳುವ  ಸಾಧ್ಯತೆ ಇದೆ. ಇದೇ ವೇಳೆ ಮಿಜೋರಾಂ ರಾಜ್ಯದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಸೋಮವಾರಕ್ಕೆ ಮುಂದೂಡಲಾಗಿದೆ.  ರಾಜಸ್ತಾನ ಹಾಗೂ ಮಧ್ಯಪ್ರದೇಶ ದಲ್ಲಿ ಬಿಜೆಪಿ, ತೆಲಂಗಾನ ಹಾಗೂ ಛತ್ತೀಸ್‌ಗಡ್‌ನಲ್ಲಿ ಕಾಂಗ್ರೆಸ್‌ಗೆ ಜಯ ಸಾಧ್ಯತೆ ಇದೆಯೆಂದು ಚುನಾವಣೆ ಬಳಿಕ ವಿವಿಧ ಚಾನೆಲ್‌ಗಳು ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಇದೇ ವೇಳೆ ಮಿಜೋರಾಂನಲ್ಲಿ ಸಣ್ಣ ಪಕ್ಷಗಳು ಹಾಗೂ ಕಾಂಗ್ರೆಸ್ ಸೇರಿ  ಸರಕಾರ ರಚನೆ ಸಾಧ್ಯವಿದೆಯೆಂದೂ ತಿಳಿಸಲಾಗಿದೆ.

You cannot copy contents of this page