ನಾಲ್ಕೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ 62 ಕಾಡು ಹಂದಿಗಳನ್ನು ಕೊಲ್ಲಲಾಗಿದೆ-ವಿಧಾನಸಭೆಯಲ್ಲಿ ಸಚಿವ ; ಕಳೆದ ಏಳು ವರ್ಷದಲ್ಲಿ ಜಿಲ್ಲೆಯಲ್ಲಿ ಕಾಡು ಹಂದಿಗಳಿAದ 7 ಮಂದಿಗೆ ಪ್ರಾಣಹರಣ

ಕಾಸರಗೋಡು: ಕಳೆದ ನಾಲ್ಕೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಅಕ್ರಮಣಕಾರಿಯಾದ 62 ಕಾಡುಹಂದಿ ಗಳನ್ನು ಕೊಲ್ಲಲಾಗಿದೆ ಯೆಂದು ವಿಧಾನಸಭೆಯಲ್ಲಿ ಅರಣ್ಯ ಖಾತೆ ಸಚಿವಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ.
ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಂಡಿಸಿದ ಪ್ರಶ್ನೆಗೆ ಸಚಿವರು ಈ ಲೆಕ್ಕಾಚಾರ ನೀಡಿದ್ದಾರೆ. ಇದರಂತೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಮಂಜೇಶ್ವರ-8, ಕಾಸರಗೋಡು-8, ಉದುಮ-13, ಹೊಸದುರ್ಗ-29 ಮತ್ತು ತೃಕರಿಪುರ ದಲ್ಲಿ 4 ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾಡು ಹಂದಿಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಅದಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಹೆಚ್ಚಿನ ಮುತುವರ್ಜಿ ತೋರುತ್ತಿಲ್ಲ. ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ ಒಟ್ಟು 4663 ಕಾಡು ಹಂದಿಗಳನ್ನು ಕೊಲ್ಲಲಾಗಿದೆ. ಮಲಪ್ಪುರಂ ಜಿಲ್ಲೆಯ ವಂಡೂರಿನಲ್ಲಿ ಮಾತ್ರವಾಗಿ 383 ಕಾಡು ಹಂದಿಗಳನ್ನು ಕೊಲ್ಲಲಾಗಿದ್ದರೆ, ಅತೀ ಹೆಚ್ಚು ಕಾಡುಹಂದಿಗಳ ಉಪಟಳವಿರುವ ಕಾಸರಗೋಡಿನಲ್ಲಿ ಈ ಅವಧಿಯಲ್ಲಿ ಕೇವಲ 62ರಷ್ಟು ಮಾತ್ರವೇ ಕೊಲ್ಲಲಾಗಿದೆ.
ಉಪಟಳಕಾರಿ ಕಾಡುಹಂದಿ ಗಳನ್ನು ಗುಂಡಿಕ್ಕಿ ಹತ್ಯೆಗೈಯ್ಯಲು 2018 ಮೇ 18ರಂದು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಲೈಸನ್ಸ್ ಕೋವಿ ಹೊಂದಿರುವವರ ಎಂ. ಪ್ಯಾನಲ್ ತಯಾರಿಸಿ ಅದರ ಆಧಾರದಲ್ಲಿ ಶೂಟರ್ಗಳಿಗೆ ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿದೆ. ಹೀಗೆ ಒಂದು ಕಾಡುಹಂದಿ ಯನ್ನು ಗುಂಡಿಕ್ಕಿ ಕೊಂದಲ್ಲಿ ತಲಾ 1000 ರೂ.ನಂತೆ ಹಣ ನೀಡಲಾಗುತ್ತಿದೆ. ಈ ಮೊತ್ತವನ್ನು 1500 ರೂ. ಆಗಿ ಹೆಚ್ಚಿಸಲು ಹಾಗೂ ಸತ್ತ ಕಾಡು ಹಂದಿ ಯ ಕಳೇಬರವನ್ನು ಸಂಸ್ಕರಿಸಲು 2000 ರೂ. ನೀಡಲು ಸರಕಾರ ಈಗ ತೀರ್ಮಾನಿಸಿದೆ.
2018ರಿಂದ 2024ರ ಅವಧಿ ಯಲ್ಲಿ ಜಿಲ್ಲೆಯಲ್ಲಿ ಕಾಡುಹಂದಿಗಳ ದಾಳಿಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿ ಯಲ್ಲಿ 49 ಮಂದಿ ಕಾಡು ಹಂದಿಯ ದಾಳಿಯಿಂದ ಗಾಯಗೊಂಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕಾಡು ಹಂದಿಗಳು ಉಂಟುಮಾಡಿದ ಕೃಷಿ ನಾಶನಷ್ಟಗಳ ಲೆಕ್ಕಾಚಾರ ಸರಕಾರ ಇನ್ನೂ ಮಂಡಿಸಿಲ್ಲ.

Leave a Reply

Your email address will not be published. Required fields are marked *

You cannot copy content of this page