ನಾಳೆಯಿಂದ ರಾಜ್ಯಗಳಿಗೆ ಚುನಾವಣಾ ಆಯೋಗ ಭೇಟಿ
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯಗಳ ಸಿದ್ಧತೆಯ ಮೌಲ್ಯಮಾಪನ ನಡೆಸಲು ಕೇಂದ್ರ ಚುನಾವಣಾ ಆಯೋಗ (ಇಸಿ) ನಾಳೆಯಿಂದ ರಾಜ್ಯಗಳಿಗೆ ಬೇಟಿ ನೀಡಲಿದೆ.
ಆರಂಭದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಚುನಾವಣಾ ಆಯೋಗ ಸಂದರ್ಶಿಸಲಿದೆ. ಇದರಂತೆ ಮೊದಲು ಆಂಧ್ರ ಪ್ರದೇಶ ಮತ್ತು ತಮಿಳುನಾಡು, ತೆಲಂಗಾನ ರಾಜ್ಯಗಳಿಗೆ ಆಯೋಗ ಬೇಟಿ ನೀಡಲಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ರಾಜ್ಯಗಳಲ್ಲಿ ನಡೆಸಲಾಗಿರುವ ಪೂರ್ವಬಾವಿ ಸಿದ್ಧತೆಗಳ ಬಗ್ಗೆಯೂ ಆಯೋಗ ಆಯಾ ರಾಜ್ಯ ಚುನಾವಣಾ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್‌ರ ನೇತೃತ್ವದಲ್ಲಿ ಚುನಾವಣಾ ಆಯುಕ್ತರಾದ ಅನೂಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯಲ್‌ರನ್ನು ಒಳಗೊಂಡ ತಂಡ ಈ ಬೇಟಿ ನಡೆಸಲಿದೆ. ಲೋಕಸಭಾ ಚುನಾವಮೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಆಯೋಗ ಬಹುತೇಕ ಎಲ್ಲಾ ರಾಜ್ಯಗಳಿಗೂ ಬೇಟಿ ನೀಡಲಿದೆ. ಬಳಿಕ ಆಯಾ ರಾಜ್ಯಗಳ ಸಿದ್ಧತೆಗಳ ಬಗ್ಗೆ ಆಯೋಗ ಬಳಿಕ ಸಂಕ್ಷಿಪ್ತ ಮಾಹಿತಿಗಳನ್ನು ನೀಡಲಿದೆ.
ಈ ವರ್ಷ ಮಾರ್ಚ್- ಎಪ್ರಿಲ್ ತಿಂಗಳೊಳಗಾಗಿ ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆಗೆ ಅಗತ್ಯದ ಪೂರ್ವಬಾವಿ ಸಿದ್ಧತೆಗಳಲ್ಲಿ ಹೆಚ್ಚಿನ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆಗಳಲ್ಲಿ ಈಗಾಗಲೇ ತೊಡಗಿವೆ. ಬಿಜೆಪಿ ಇದರಲ್ಲಿ ಮೊದಲ ಸರದಿಗೆ ತಲುಪಿದೆ. ಲೋಕಸಭಾ ಚುನಾವಣೆಗೆ ಭರದ ಸಿದ್ಧತೆಯನ್ನು ನಡೆಸಿರುವ ಬಿಜೆಪಿ ದೆಹಲಿಯಲ್ಲಿ ಒಂದು ಮಹತ್ವದ ಸಭೆ ಕರೆದಿದೆ. ಇದರಲ್ಲಿ ಚುನಾವಣಾ ತಯಾರಿಗೆ ಅಗತ್ಯದ ಕಾರ್ಯ ಕ್ರಮಗಳ ರೂಪುರೇಷೆ ನೀಡಲಾಗು ವುದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ.