ನಾಳೆ ಕರ್ಕಾಟಕ ಅಮವಾಸ್ಯೆ: ಬಲಿತರ್ಪಣೆಗೆ ಸಕಲ ಸಿದ್ಧತೆ
ಬೇಕಲ: ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕರ್ಕಾಟಕ ಅಮವಾಸ್ಯೆ ಪ್ರಯುಕ್ತ ಅಗಲಿದ ಹಿರಿಯರಿಗೆ ಬಲಿತರ್ಪಣ ನೀಡಲು ಸಿದ್ಧತೆ ಏರ್ಪಡಿಸಲಾಗಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ತಿಳಿಸಿದೆ.
ನಾಳೆ ಕರ್ಕಾಟಕ ಅಮವಾಸ್ಯೆ ಯಾಗಿದ್ದು, ಬೆಳಿಗ್ಗೆ 5.30ರ ಪೂಜೆಯ ಬಳಿಕ ಬಲಿತರ್ಪಣೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಅರ್ಚಕ ನವೀನ್ಚಂದ್ರ ಕಾಯರ್ತ್ತಾಯ ನೇತೃತ್ವ ನೀಡುವರು. ಸಮುದ್ರ ತೀರದಲ್ಲಿ ಬಲಿತರ್ಪಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಂದಣಿಯನ್ನು ಕಡಿಮೆ ಮಾಡಲು ಕೂಪನ್ ಮೊದಲೇ ವಿತರಿಸಲು ಆರಂಭಿಸಲಾಗಿದ್ದು, ಆನ್ಲೈನ್ನಿಂದಲೂ ಪಡೆದುಕೊಳ್ಳ ಬಹುದೆಂದು ಕ್ಷೇತ್ರದ ಪದಾಧಿಕಾರಿಗಳು ತಿಳಿಸಿದ್ದಾರೆ. ತರ್ಪಣೆಗೆ ತಲುಪುವವರಿಗೆ ಸಹಾಯ ಮಾಡಲು ಪೊಲೀಸರು, ಕೋಸ್ಟ್ಗಾರ್ಡ್ ಹೆಲ್ಪ್ ಎಂಬೀ ವಿಭಾಗಗಳ ಸೇವೆ ಲಭ್ಯವಿದೆ. ಚಂದ್ರಗಿರಿ ರೂಟ್ನಲ್ಲಿ ಪ್ರಸ್ತುತ ಇರುವ ಬಸ್ ವ್ಯವಸ್ಥೆಯ ಹೊರತಾಗಿ ಹೆಚ್ಚುವರಿ ಬಸ್ ಸಂಚರಿಸಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಮಹಿಷ ಮರ್ದಿನಿ ಕ್ಷೇತ್ರ: ಚಟ್ಟಂಚಾಲ್ ಮಹಾಲಕ್ಷ್ಮಿಪುರಂ ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲೂ ಕರ್ಕಾಟಕ ಅಮವಾಸ್ಯೆ ಪ್ರಯುಕ್ತ ಬಲಿತರ್ಪಣೆಗೆ ಸಿದ್ಧತೆ ನಡೆಸಲಾಗಿದೆ. ನಾಳೆ ಬೆಳಿಗ್ಗೆ 6.30ರಿಂದ ಕ್ಷೇತ್ರ ಮುಂಭಾಗದ ತ್ರಿವೇಣಿ ಸಂಗಮದಲ್ಲಿ ಬಲಿತರ್ಪಣೆಗೆ ಸೌಕರ್ಯ ಏರ್ಪಡಿಸಲಾಗಿದೆ ಎಂದು ಕ್ಷೇತ್ರಾಡಳಿತ ಸಮಿತಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9446367030 ನಂಬ್ರದಲ್ಲಿ ಸಂಪರ್ಕಿಸಬಹುದಾಗಿದೆ.