ನಾಳೆ ವಿಶ್ವ ಏಡ್ಸ್ ದಿನಾಚರಣೆ: ಜಿಲ್ಲೆಯಲ್ಲಿ ೪೨ ಮಂದಿಯಲ್ಲಿ ಎಚ್ಐವಿ ಸೋಂಕು ಪತ್ತೆ; ೯೧೫ ಮಂದಿ ಚಿಕಿತ್ಸೆಯಲ್ಲಿ
ಕಾಸರಗೋಡು: ನಾಳೆ ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುವುದು. ೨೦೨೨ ಎಪ್ರಿಲ್ನಿಂದ ೨೦೨೩ ಮಾರ್ಚ್ ತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಸಲಾದ ಏಡ್ಸ್ ರೋಗ ತಪಾಸಣೆಯಲ್ಲಿ ೪೨ ಮಂದಿಯಲ್ಲಿ ಎಚ್ಐವಿ ಸೋಂಕು ಖಾತರಿಪಡಿಸಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೩೪೦೯೭ ಮಂದಿಯನ್ನು ಎಚ್ಐವಿ ರೋಗ ತಪಾಸಣೆಗೊಳಪಡಿಸಲಾಗಿತ್ತು. ಅದರಲ್ಲಿ ೯೨೫೪ ಮಂದಿ ಗರ್ಭಿಣಿಯರೂ ಒಳಗೊಂಡಿದ್ದರು. ಇದರಲ್ಲಿ ೪೨ ಮಂದಿಯಲ್ಲಿ ಎಚ್ಐವಿ ಸೋಂಕು ಪತ್ತೆಹಚ್ಚಲಾಗಿದೆ. ಇದರ ಹೊರತಾಗಿ ಕಳೆದ ಎಪ್ರಿಲ್ನಿಂದ ಅಕ್ಟೋಬರ್ ತನಕದ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೧೫೦೨೯ ಮಂದಿಯನ್ನು ತಾಪಸಣೆಗೊಳಪಡಿಸಲಾಗಿದ್ದು, ಅದರಲ್ಲಿ ೧೮ ಮಂದಿಯಲ್ಲಿ ಎಚ್ಐವಿ ಸೋಂಕು ದೃಢೀಕರಿಸಲ್ಪmಟ್ಟಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಏಡ್ಸ್ ಕಂಟ್ರೋಲ್ ಸೊಸೈಟಿ ಎಚ್ಐವಿ ಸೋಂಕು ಪ್ರತಿರೋಧಕ ಕ್ರಮಕ್ಕೆ ನೇತೃತ್ವ ನೀಡುತ್ತಿದೆ. ಎಚ್ಐವಿ ಪೊಸಿಟಿವ್ ಪತ್ತೆಯಾದ ಎಲ್ಲರಿಗೂ ಅಗತ್ಯದ ಸಲಹೆಗಳನ್ನು ನೀಡಿದ ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರುವ ಎಚ್ಐವಿ ಚಿಕಿತ್ಸಾ ಕೇಂದ್ರವಾದ ‘ಉಷನ್ಸ್’ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜ್ಯಾರಿಯಲ್ಲಿ ಈ ಕೇಂದ್ರದಲ್ಲಿ ೪೬೪ ಮಹಿಳೆಯರು ಮತ್ತು ೪೫೧ ಪುರುಷರೂ ಸೇರಿದಂತೆ ಒಟ್ಟು ೯೧೫ ಮಂದಿಗೆ ಎಆರ್ಡಿ (ಆಂಟಿ ವೈರಲ್ ಥೆರಾಫಿ) ಚಿಕಿತ್ಸೆ ನೀಡಲಾಗುತ್ತಿದೆ.
೨೦೨೩ನೇ ವರ್ಷದಲ್ಲಿ ಈ ತನಕ ಎಆರ್ಟಿ ಕೇಂದ್ರದಲ್ಲಿ ೪೧ ಹೊಸ ಎಚ್ಐವಿ ಪೊಸಿಟಿವ್ ಪ್ರಕರಣ ದಾಖಲಿಸಲಾಗಿದೆ. ಎಚ್ಐವಿ ಟೆಸ್ಟ್ ಹಾಗೂ ಕೌನ್ಸಿಲಿಂಗ್ ನಡೆಸಲು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಾಗಿ ಆರು ಇಂಟಗ್ರೇಟೆಡ್ ಕೌನ್ಸಿಲಿಂಗ್ ಆಂಡ್ ಟೆಸ್ಟಿಂಗ್ ಸೆಂಟರ್ (ಐಸಿಟಿಟಿ) ಹಾಗೂ ೩೨ ಫೆಸಿಲಿಟಿ ಇಂಟಗ್ರೇಟೆಡ್ ಕೌನ್ಸಿಲಿಂಗ್ ಆಂಡ್ ಟೆಸ್ಟಿಂಗ್ ಸೆಂಟರ್ (ಎಫ್ಐಸಿಟಿಸಿ) ಕೇಂದ್ರಗಳು ಕಾರ್ಯವೆಸಗುತ್ತಿವೆ. ಇಲ್ಲಿ ಎಚ್ಐವಿ ರೋಗ ತಪಾಸಣೆ ಮತ್ತು ಅದಕ್ಕೆ ಸಂಬಂಧಿಸಿಕ ಕೌನ್ಸಿಲಿಂಗ್ ಉಚಿತವಾಗಿ ನೀಡಲಾಗುತ್ತಿದೆ. ಆ ಕುರಿತಾದ ಮಾಹಿತಿಗಳನ್ನು ಅತ್ಯಂತ ಗೌಪ್ಯವಾಗಿ ಇರಿಸಲಾಗುತ್ತದೆ. ಇನ್ನು ಲೈಂಗಿಕ ರೋಗ ದೃಢೀಕರಿಸಲ್ಪಟ್ಟವರಿಗೆ ಚಿಕಿತ್ಸೆ ನೀಡಲು ಹೊಸದುರ್ಗದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ‘ಪುಲರಿ’ ಎಂಬ ಚಿಕಿತ್ಸಾ ಕೇಂದ್ರವ್ಲೂ ಕಾರ್ಯವೆಸಗುತ್ತಿದೆ. ೨೦೨೨ ಎಪ್ರಿಲ್ನಿಂದ ೨೦೨೩ ಮಾರ್ಚ್ ತನಕದ ಅವಧಿಯಲ್ಲಿ ಈ ಕೇಂದ್ರದಲ್ಲಿ ೧೬೦೩ ಮಂದಿಯನ್ನು ರೋಗ ತಪಾಸಣೆಗೊಳಪಡಿಸಲಾಗಿದೆ. ಆ ಪೈಕಿ ೨೭೦ ಮಂದಿಯಲ್ಲಿ ವಿವಿಧ ರೀತಿಯ ಲೈಂಗಿಕ ರೋಗ ದೃಢೀಕರಿಸಲಾಗಿದೆ. ಮಾತ್ರವಲ್ಲ ೨೧ ಮಂದಿಗೆ ಸಿಫಿಲಿಸ್ ರೋಗ ಚಿಕಿತ್ಸೆಯನ್ನೂ ನೀಡಲಾಗಿದೆ.
ಎಚ್ಐವಿ ಮತ್ತು ಅದಕ್ಕೆ ಸಬಂಧಿಸಿದ ಇತರ ರೋಗಗಳು ಅತೀ ಹೆಚ್ಚಿರುವ ವಿಭಾಗದಲ್ಲಿ ರೋಗ ಪ್ರತಿರೋಧಕ ಚಟುವಟಿಕೆ ನಡೆಸಲು ಪಾನ್ಟೆಕ್, ಎನ್ವೈಕೆ, ಸಿಆರ್ಡಿ, ಹೆಲ್ತ್ ಲೈನ್ ಎಂಬೀ ಸುರಕ್ಷಾ ಪ್ರೊಜೆಕ್ಟ್ಗಳೂ ಜಿಲ್ಲೆಯಲ್ಲಿ ಕಾರ್ಯವೆಸಗುತ್ತಿವೆ.