ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಗಗನಕ್ಕೆ: ಸಂಕಷ್ಟಕ್ಕೀಡಾದ ಜನತೆ
ಕಾಸರಗೋಡು: ರಾಜ್ಯದಲ್ಲಿ ಸಾರ್ವಜನಿಕ ಮಾರುಕಟ್ಟೆಯಲ್ಲಿ ನಿತ್ಯೋಪಯೋಗ ಸಾಮಗ್ರಿಗಳ ಬೆಲೆಯೇರಿಕೆ ತೀವ್ರಗೊಂಡಿದ್ದು, ಜನರು ಸಂಕಷ್ಟ ಅನುಭವಿಸುವಂತಾಗಿದೆ. ಜನಸಾಮಾನ್ಯರು ಹೆಚ್ಚಾಗಿ ಆಶ್ರಯಿಸು ತ್ತಿದ್ದ ಮಾವೇಲಿ ಸ್ಟೋರ್, ಸಪ್ಲೈಕೋ, ಸೂಪರ್ ಮಾರ್ಕೆಟ್ಗಳಲ್ಲೂ ರಿಯಾಯಿತಿ ಬೆಲೆಯಲ್ಲಿ ಲಭಿಸುವ ಸಾಮಗ್ರಿಗಳಿಗೆ ಕ್ಷಾಮ ಉಂಟಾಗಿದ್ದು, ಇದೇ ಸಂದರ್ಭದಲ್ಲಿ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಬೆಲೆಯೇರಿಕೆ ಯಾಗಿರುವುದು ಜನರಿಗೆ ತೀವ್ರ ಹೊಡೆತವಾಗಿ ಪರಿಣಮಿಸಿದೆ.
ಉತ್ತರಭಾರತದಲ್ಲಿ ಬೆಳೆಯ ಕೊಯ್ಲು ಕೊನೆಗೊಂಡಿದ್ದು, ಇದರಿಂದ ಅಲ್ಲಿಂದ ಆಹಾರ ಸಾಮಗ್ರಿಗಳು ರಾಜ್ಯಕ್ಕೆ ತಲುಪತೊಡಗಿದೆ.
ಈ ರೀತಿ ಹೊರ ರಾಜ್ಯಗಳಿಂದ ಸಾಮಗ್ರಿ ಇಲ್ಲಿಗೆ ತಲುಪುವಾಗ ಬೆಲೆಯಲ್ಲಿ ಕಡಿತ ವುಂಟಾಗಬೇಕಾಗಿತ್ತು. ಆದರೆ ಅದಕ್ಕೆ ತೀರಾ ವಿರುದ್ಧ ರೀತಿಯಲ್ಲಿ ಸ್ಥಿತಿಗತಿ ಸಾಗುತ್ತಿದೆ. ಇದರ ಹಿಂದೆ ಕೆಲವು ಮಧ್ಯವರ್ತಿಗಳು ಕೈಯ್ಯಾಡಿಸಿರಬಹುದೇ ಎಂದು ಸಂಶಯಿಸಬೇಕಾಗಿದೆ. ಜನರಿಗೆ ಕಡಿಮೆ ಬೆಲೆಗೆ ಸಾಮಗ್ರಿಗಳನ್ನು ದೊರಕಿಸಿಕೊಡ ಬೇಕಾದ ಸರಕಾರ ಆ ಕ್ರಮದಲ್ಲಿ ಪರಾಭವಗೊಂಡಿರುವುದನ್ನು ತಿಳಿದ ಮಧ್ಯವರ್ತಿಗಳು ಮಾರುಕಟ್ಟೆಯಲ್ಲಿ ಬೆಲೆಯೇರಿಕೆ ಮಾಡಿ ಅಪರಿಮಿತ ಲಾಭ ಗಳಿಸುವ ಗೂಢತಂತ್ರವನ್ನು ನಡೆಸಿದ್ದಾರೆಂದೂ ಹೇಳಲಾತ್ತದೆ. ಇದರ ಪರಿಣಾಮ ಜನರು ಬೆಲೆಯೇರಿಕೆಯಿಂದ ಕಂಗಾಲಾಗಿದ್ದಾರೆ.
ಮಾರುಕಟ್ಟೆಯಲ್ಲಿ ಇದೀಗ ಒಂದು ಕಿಲೋ ನೀರುಳ್ಳಿ ಬೆಲೆ ಇಮ್ಮಡಿಗೊಂಡು ೬೮ ರೂಪಾಯಿಗೇರಿದೆ. ಅದೇ ರೀತಿ ಬಿಳಿ ಕಡಲೆಗೆ ೧೦೦ರಿಂದ ೧೯೦ ರೂ.ಗೇರಿದೆ. ಪ್ರಥಮ ದರ್ಜೆಯ ಸಾಂಬಾರ್ ಬೇಳೆಗೆ ೧೧೫ರಿಂದ ೧೮೦, ದ್ವಿತೀಯ ದರ್ಜೆಯ ಬೇಳೆಗೆ ೯೦ರಿಂದ ೧೪೦, ಬಟಾಟೆ ರೂ. ೩೦ರಿಂದ ೪೮ ರೂಪಾಯಿಗೇರಿದೆ. ಹೀಗೆ ಪ್ರತಿಯೊಂ ದು ಸಾಮಗ್ರಿಗಳೂ ಬೆಲೆಯೇರಿಕೆಯಾಗಿ ಜನರು ಕಂಗಾಲಾಗಿದ್ದಾರೆ.
ರಾಜ್ಯ ಸರಕಾರದ ಆಹಾರ-ನಾಗರಿಕಾ ಪೂರೈಕೆ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುವ ಸಪ್ಲೈಕೋ ಮೌನದಲ್ಲಿದೆ. ಅಕ್ಕಿ ಸಹಿತ ೯ ಬಗೆಯ ಸಾಮಗ್ರಿಗಳು ಸಬ್ಸಿಡಿ ದರದಲ್ಲಿ ಸಪ್ಲೈಕೋದಲ್ಲಿ ಮಾರಾಟ ವಾಗುತ್ತಿತ್ತು. ಆದರೆ ಅವುಗಳ ಕ್ಷಾಮ ಉಂಟಾಗಿರುವುದು ಜನಸಾಮಾನ್ಯರಿಗೆ ತೀವ್ರ ಸಂಕಷ್ಟವನ್ನು ಸೃಷ್ಟಿಸಿದೆ.
ವಿಶೇಷ ದಿನಗಳು, ವಿವಿಧ ಕಾರ್ಯಕ್ರಮಗಳು ನಡೆ ಯುತ್ತಿರು ವಂತೆಯೇ ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಅನಿಯಂತ್ರಿತ ರೀತಿಯಲ್ಲಿ ಏರಿಕೆಯಾಗುತ್ತಿರುವುದು ಜನಸಾಮಾನ್ಯರನ್ನು ಕಂಗೆಡಿಸಿದೆ.