ನಿದ್ದೆಯಲ್ಲಿ ಎದೆಯ ಮೇಲೆ ಭೂತ ಕುಳಿತಂತೆ ಭಾಸವಾಗುತ್ತಿದೆಯೇ? ಇದಕ್ಕೆ ನಿದ್ರೆಯ ಪಾರ್ಶ್ವವಾಯುವೇ ಕಾರಣ- ವಿಜ್ಞಾನಿಗಳು
ಕಾಸರಗೋಡು: ನಿದ್ರೆಯಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಸಮಸ್ಯೆ ಎದುರಿಸಬಹುದು. ಕೆಲವೊಮ್ಮೆ ನಮ್ಮ ನಿದ್ರೆಯಲ್ಲಿಯೂ ನಾವು ಭಯಾನಕ ಕನಸುಗಳನ್ನು ಕಾಣುತ್ತೇವೆ. ನಂತರ ಇದ್ದಕ್ಕಿದ್ದಂತೆ ನೀವು ಪ್ರಜ್ಞೆಗೆ ಬಂದರೂ, ನೀವು ಏನನ್ನೂ ಮಾತನಾಡಲು ಸಾಧ್ಯವಾಗುತ್ತಿಲದಿರುವಾಗ ಬೀಳುವ ಕನಸಿನಿಂದ ನಾವು ಏನನ್ನೂ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುತ್ತೇವೆ. ಇದೇ ರೀತಿಯ ಭಾವನೆ ಅನೇಕ ಜನರಿಗೆ ಆಗುತ್ತಿದೆ. ಆ ಸಮಯದಲ್ಲಿ ನೀವು ನಿಮ್ಮ ತಲೆಯನ್ನು ಕೂಡಾ ಮೇಲಕ್ಕೆತ್ತಲು ಅಥವಾ ಚಲಿಸಲೂ ಸಾಧ್ಯವಾಗದ ಸ್ಥಿತಿ ಉಂಟಾಗುತ್ತದೆ. ಆ ಸಮಯದಲ್ಲಿ ನೀವು ಜೋರಾಗಿ ಕೂಗಲು ಬಯಸುತ್ತೀರಿ. ಆದರೆ ಶಬ್ದ ಹೊರ ಬರುವುದಿಲ್ಲ. ಎದೆಯ ಮೇಲೆ ಏನೋ ಭಾರವಿದೆ ಎಂದು ತೋರುತ್ತದೆ. ಸಾಮಾನ್ಯವಾಗಿ ಅಂತಹ ವಿಷಯ ಸಂಭವಿಸುವಾಗ ದೆವ್ವದ ಕಿರುಕುಳದಿಂದ ಇದು ಉಂಟಾಗುತ್ತದೆ. ಗಾಳಿಯ ಸೋಂಕಿಗೆ ಒಳಗಾಗಿದೆ ಎಂದು ಹಿರಿಯರು ಭಾವಿಸುತ್ತಾರೆ. ವಾಸ್ತವವಾಗಿ ವಿಜ್ಞಾನದ ಪ್ರಕಾರ ವಿಜ್ಞಾನಿಗಳು ಇದಕ್ಕೆ ಕಾರಣಗಳನ್ನು ನೀಡುತ್ತಿದ್ದಾರೆ.
ಕೆಲವೊಮ್ಮೆ ಈ ಪರಿಸ್ಥಿತಿಯಲ್ಲಿ ಯಾರೋ ನಿಮ್ಮ ಎದೆಯ ಮೇಲೆ ಕುಳಿತಂತೆ ಭಾಸವಾಗುತ್ತದೆ. ನಿಮಗೆ ಉಸಿರಾಡಲು ಕೂಡಾ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದು ಭಯಾನಕ ಕನಸು ಅಲ್ಲ. ದೆವ್ವ ಉಪಟಳದಿಂದಾಗಲೀ ದೈವಗಳ ಕಾಟದಿಂದ ಇದು ಉಂಟಾಗುತ್ತಿಲ್ಲ. ಅದಾಗ್ಯೂ ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ನಿದ್ರೆಯ ಪಾರ್ಶ್ವವಾಯು (ಸ್ಲೀಪಿಂಗ್ ಪ್ಯಾರಲಿಸಿಸ್) ಎಂದು ಕರೆಯಲಾಗುತ್ತದೆ. ಅದು ಸಂಭವಿಸುವಾಗ ನೀವು ಕೆಲವು ನಿಮಿಷಗಳ ಕಾಲ ಚಲಿಸಲು ಸಾಧ್ಯವಾಗದು. ಪದಗಳು ಬಾಯಿಯಿಂದ ಹೊರ ಬರುವುದಿಲ್ಲ. ವಾಸ್ತವವಾಗಿ ಇದು ನಾರ್ಕೋಲೆಪ್ಸಿಗೆ ಸಂಭವಿಸಿದ ವಿಷಯವಾಗಿದೆ. ಇದು ನಿದ್ರೆಯ ಕೊರತೆ ಮತ್ತು ಜಡ ಕೆಲಸದಿಂದ ನಾರ್ಕೋಲೆಪ್ಸಿ ಉಂಟಾಗುತ್ತದೆ ಎಂದು ವಿಜ್ಞಾನ ಹೇಳುತ್ತದೆ.
ವಾಸ್ತವವಾಗಿ ನಾರ್ಕೋಲೆಪ್ಸಿ ನಿದ್ರೆಯ ಅಸ್ವಸ್ಥತೆಗೆ ಸಂಬಂಧಿಸಿದ್ದಾಗಿದೆ. ನಿದ್ರೆಯ ಕೊರತೆ ಮತ್ತು ಜಡ ಕೆಲಸದಿಂದ ನಾರ್ಪೋಲೆಪ್ಸಿ ಉಂಟಾಗುತ್ತದೆ. ಶೇಕಡಾ ೯೦ರಷ್ಟು ಜನರು ತಮ್ಮ ನಿದ್ರೆಯಲ್ಲಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಸಂಭವಿಸದಂತೆ ತಡೆಯಲು ಸಿಹಿ ಸುಗಂಧ ದ್ರವ್ಯಗಳನ್ನು ಹೊರ ಸೂಸುವ ದಿಂಬಿನ ಮೇಲೆ ೨ ಅಥವಾ ೩ ಹನಿ ಸೌರಭೂತ ತೈಲವನ್ನು ಹಾಕಿ ನಿದ್ರೆ ಮಾಡಿದರೆ ಉತ್ತಮ. ಇದಲ್ಲದೆ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಬೇಕು ಎಂದು ವಿಜ್ಞಾನ ಪ್ರಕಾರ ಹೇಳಲಾಗುತ್ತಿದೆ.