ನಿಧನ
ಬಂದಡ್ಕ: ಹೊಸನಗರ ರಾಮಚಂದ್ರಾಪುರ ಮಠದ ಸ್ವಾಮೀಜಿಯವರ ಶಿಷ್ಯರಾಗಿದ್ದ ಬೇಡಡ್ಕ ಪೇರ್ಯ ನಿವಾಸಿ ಪಿ. ಸುಬ್ರಹ್ಮಣ್ಯ ಭಟ್ (82) ನಿಧನ ಹೊಂದಿದರು. ಮೃತರು ಪತ್ನಿ ವೆಂಕಟೇಶ್ವರಿ ಅಮ್ಮ, ಮಕ್ಕಳಾದ ಶ್ರೀಕೃಷ್ಣ ಭಟ್, ಶಿವಕುಮಾರ್, ಉದಯ ಕುಮಾರ್, ಗಣೇಶ್ ಭಟ್, ಸೊಸೆಯಂದಿರಾದ ಶ್ರದ್ಧಾಲಕ್ಷ್ಮಿ, ಭಾರತಿ, ಸ್ವಾತಿ, ಸಹೋದರರಾದ ರಾಮ ಭಟ್ ಪಿ, ಶಂಕರ ಭಟ್, ಕೇಶವ ಭಟ್, ಗೋಪಾಲಕೃಷ್ಣ ಭಟ್, ಸಹೋದರಿಯ ರಾದ ಶಾರದಾ ಮುಂಡ್ಯತ್ತಡ್ಕ, ಶಂಕರಿ ಸುಳ್ಯ, ಈಶ್ವರಿ, ಜಯಕುಮಾರಿ (ಜ್ಯೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಕುಂಬ್ಡಾಜೆ ಎಫ್‌ಎಚ್‌ಸಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.