ನಿಧನ
ಮಂಜೇಶ್ವರ: ಮಜಿಬೈಲ್ ಜಿಎಲ್‌ಪಿ ಶಾಲೆ ಬಳಿಯ ನಿವಾಸಿ ದಿ| ಚಂದ್ರಶೇಖರ ಎಂಬವರ ಪತ್ನಿ ಸುಂದರಿ (81) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅಲ್ಲಿ ನಿಧನ ಸಂಭವಿಸಿದೆ. ಮೃತರು ಮಕ್ಕಳಾದ ಗೀತಾ, ಉಷಾಲತಾ, ಜಯೇಶ್, ಬಬಿತ, ಅಳಿಯಂದಿರಾದ ಪದ್ಮನಾಭ, ಕೊರಗಪ್ಪ, ಕಿರಣ್, ಸೊಸೆ ನವ್ಯ, ಸಹೋದರ ವಿಶ್ವನಾಥ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.