ನಿರ್ದೇಶಕ ಬಾಲಚಂದ್ರ ಕುಮಾರ್ ನಿಧನ
ಆಲಪ್ಪುಳ: ಕೊಚ್ಚಿಯಲ್ಲಿ ನಟಿಗೆ ಆಕ್ರ ಮಣ ನಡೆಸಿದ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ನಿರ್ದೇಶಕ ಪಿ. ಬಾಲಚಂದ್ರ ಕುಮಾರ್ ನಿಧನ ಹೊಂದಿದರು. ಚೆಂಗ ನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಸಾವು ಸಂಭವಿಸಿದೆ. 2013ರಲ್ಲಿ ‘ಕೌ ಬಾಯ್’ ಎಂಬ ಸಿನಿ ಮಾವನ್ನು ನಿರ್ದೇಶಿಸಿದ್ದರು.ನಟಿಗೆ ಆಕ್ರಮ ಣ ನಡೆಸಿದ ಪ್ರಕರಣದಲ್ಲಿ ಒಂದನೇ ಆರೋಪಿಯಾದ ಸುನಿಲ್ ಕುಮಾರ್ (ಪಲ್ಸರ್ ಸುನಿ) ನಟಿಗೆ ಕಿರುಕುಳ ನೀಡುವ ದೃಶ್ಯಗಳ ಪ್ರತಿ ನಟ ದಿಲೀಪ್‌ನ ಕೈವಶವಿ ತ್ತೆಂದು ಇವರು ತಿಳಿಸಿದ್ದರು. ದಿಲೀಪ್ ಹಾಗೂ ಪ್ರಥಮ ಆರೋಪಿ ಮಧ್ಯೆ ನಿಕಟ ಸಂಪರ್ಕವಿದೆ ಎಂದೂ ಇವರು ಬಹಿರಂಗಪಡಿಸಿದ್ದಾರೆ.