ನಿವೃತ್ತ ಅರಣ್ಯ ಇಲಾಖೆ ನೌಕರ ನಿಧನ
ಕಾಸರಗೋಡು: ನೆಲ್ಲಿಕುಂಜೆ ಅಂಬೇಡ್ಕರ್ ರೋಡ್‌ನ ನಿವೃತ್ತ ಅರಣ್ಯ ಇಲಾಖೆ ನೌಕರ ವಿನೋದ್ ಕುಮಾರ್ (56) ನಿಧನಹೊಂದಿ ದರು. ಭಗವತೀ ಸೇವಾ ಸಂಘ ನೆಲ್ಲಿಕುಂಜೆ ಗ್ರಾಮ ಸಮಿತಿ ಸದಸ್ಯ, ಕೇಂದ್ರ ಸಮಿತಿ ಸದಸ್ಯ, ಜೀರ್ಣೋದ್ಧಾರ ಸಮಿತಿ ನೆಲ್ಲಿಕುಂಜೆ ಗ್ರಾಮ ಸಮಿತಿ ಇನ್‌ಚಾರ್ಜ್, ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಕಾರ್ಯಕಾರಿ ಸದಸ್ಯ, ಎಸ್‌ಎನ್‌ಡಿಪಿ ಯೋಗಂ ಸದಸ್ಯರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಫಾರೆಸ್ಟ್ ರೇಂಜ್ ಆಫೀಸರ್ ಆಗಿದ್ದ ದಿ| ದಿವಾಕರ-ಜಯಲತ ದಂಪತಿಯ ಪುತ್ರನಾದ ಮೃತರು ಪತ್ನಿ ಸ್ನೇಹ ಲತಾ, ಮಕ್ಕಳಾದ ವಾಣಿಶ್ರೀ, ವಿನೋದಿನಿ, ಅಳಿಯಂದಿರಾದ ಶ್ರೀಜಿತ್, ಸುಧೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.