ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ನಿಧನ
ಕುಂಬಳೆ: ಕಿದೂರು ಅಡಿಗಳ ಮನೆ ನಿವಾಸಿಯೂ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿಯಾದ ಶ್ರೀಕೃಷ್ಣ ವಿಶ್ವೇಶ್ವರ ಶರ್ಮ (74) ನಿನ್ನೆ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಕಿದೂರು ಶ್ರೀ ಮಹಾದೇವ ಕ್ಷೇತ್ರದ ಪ್ರಧಾನ ಅರ್ಚಕ ಹಾಗೂ ಮೊಕ್ತೇಸರರೂ ಆಗಿದ್ದರು.
ಮೃತರು ಪತ್ನಿ ಸಾವಿತ್ರಿ (ನಿವೃತ್ತ ಅಧ್ಯಾಪಿಕೆ), ಮಕ್ಕಳಾದ ಡಾ| ಶಾಮರಾಜ್, ಅನುರಾಧ, ಅಳಿಯ ಕೇಶವ ಕುಮಾರ್, ಸೊಸೆ ಅನುಪಮ, ಸಹೋದರ- ಸಹೋದರಿಯರಾದ ಯಜ್ಞ ನಾರಾಯಣ (ನಿವೃತ್ತ ಅಧ್ಯಾಪಕ), ಸುಧಾಕರ ಶರ್ಮ, ವಸಂತ ಕೃಷ್ಣ, ಜಯಶಂಕರ, ಗಣೇಶರಾಯ, ಪದ್ಮಾವತಿ, ಸುಲೋಚನ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.