ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಬದಿಯಡ್ಕ: ಪಟ್ಟಾಜೆ ಬಳಿಯ ತಲ್ಪನಾಜೆ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಸದಾನಂದ (೬೫) ನಿಧನ ಹೊಂದಿದರು. ಹೃದಯ ಸಂಬಂಧ ಅಸೌಖ್ಯ ಕಾಣಿಸಿಕೊಂಡ ಇವರನ್ನು ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಇಂದು ಮುಂಜಾನೆ ವೇಳೆ ನಿಧನ ಸಂಭವಿಸಿದೆ. ಇವರು ನೆಲ್ಲಿಕುಂಜೆ ಸರಕಾರಿ ವೆಲ್ಫೇರ್ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಆದಿವಾಸಿ ಕ್ಷೇಮ ಸಮಿತಿ ಕುಂಬಳೆ ಏರಿಯಾ ಸಮಿತಿ ಸದಸ್ಯರಾಗಿದ್ದರು. ದಿ| ಗೋವಿಂದ ನಾಯ್ಕ- ಸರಸ್ವತಿ ದಂಪತಿಯ ಪುತ್ರನಾದ ಮೃತರು ಪತ್ನಿ ಜ್ಯೋತಿ ಯಾನೆ ಪರಮೇಶ್ವರಿ, ಮಕ್ಕಳಾದ ರವಿಕಿರಣ್, ಶಾಂತ, ಸಹೋದರ ಸುಬ್ರಾಯ ನಾಯ್ಕ, ಸಹೋದರಿ ಯರಾದ ಲಕ್ಷ್ಮಿ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page