ಪಳ್ಳತ್ತಡ್ಕ ಶಾಲೆ ಶಿಕ್ಷಕ ಗುರುಪ್ರಸಾದ್‌ರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಖಂಡನೀಯ ಶಿಕ್ಷಕ ನಡೆಸುವ ಹೋರಾಟಕ್ಕೆ ಪೂರ್ಣ ಬೆಂಬಲ-ಕೆ.ಸುರೇಂದ್ರನ್

ಕಾಸರಗೋಡು: ಫ್ರೀಡಂ ಕ್ವಿಜ್ ಹೆಸರಿನಲ್ಲಿ ಪಳ್ಳತ್ತಡ್ಕ ಎಯುಪಿ ಶಾಲೆಯ ಶಿಕ್ಷಕ ಗುರುಪ್ರಸಾದ್‌ರನ್ನು ಸೇವೆಯಿಂದ ಅಮಾನತುಗೊಳಿಸಿದ ಕ್ರಮ ಅತ್ಯಂತ ಖಂಡನೀಯವಾಗಿ ದೆಯೆಂದು ಬಿಜೆಪಿ ನೇತಾರ ಕೆ.ಸುರೇಂದ್ರನ್ ತಿಳಿಸಿದ್ದಾರೆ. 

ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂ ಧಿಸಿ ಸುಧೀರ್ಘಕಾಲ ಜೈಲುಶಿಕ್ಷೆ ಅನುಭ ವಿಸಿದ್ದು, ವಿ.ಡಿ. ಸಾವರ್ಕರ್ ಅವರಾಗಿದ್ದಾ ರೆಂಬುವುದು  ಐತಿಹಾಸಿಕ ಸತ್ಯವಾಗಿದೆ. ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲವೆಂದು ಇದುವರೆಗೆ ಯಾರೂ ಹೇಳಿಲ್ಲ. ಅವರು ಸುಧೀರ್ಘ ಕಾಲ ಜೈಲಿನಲ್ಲಿದ್ದರೆಂಬ ವಿಷಯವನ್ನೂ ಯಾರೂ ನಿರಾಕರಿಸುವು ದಿಲ್ಲ. ಅವರ   ವಿರುದ್ಧ ಕಾಂಗ್ರೆಸ್ ಮತ್ತು ಎಡ-ಜಿಹಾದಿ ಪಡೆಗಳು ಹೊರಿಸಿದ ಏಕೈಕ ಆರೋಪವೆಂದರೆ, ಅವರು ಜೈಲಿನಿಂದ ಹೊರಬರಲು ಬ್ರಿಟೀಷರಿಗೆ ಕ್ಷಮಾಪಣೆ ಅರ್ಜಿಯನ್ನು ಸಲ್ಲಿಸಿದ್ದರು ಎಂಬುದು ಮಾತ್ರ. ಈ ವಿಷಯದ ಕುರಿತು ಅವರ ಮೊಮ್ಮಗ ಇತ್ತೀಚೆಗೆ ಹೇಳಿದ್ದೇನೆಂದರೆ, ಇದು ಜೈಲು ಖೈದಿಗಳು ಹಾಗೂ ಜಾಮೀನು ಆಗ್ರಹಿಸುವವರು ಸಾಮಾನ್ಯವಾಗಿ ಅನುಸರಿಸುವ ಕಾನೂನು ಪ್ರಕ್ರಿಯೆ ಮಾತ್ರ ಎಂಬುದಾಗಿದೆ. ಏನೇ ಆದರೂ ಅವರ ಮೇಲೆ ಹೊರಿಸಲಾದ ಕ್ಷಮಾಪಣೆ ವಿಷಯವು ಇಂದಿಗೂ ತರ್ಕಬದ್ಧ ಚರ್ಚಾ ವಿಷಯವಾಗಿದೆ. ಏನೇ ಆಗಿರಲಿ, ಅವರು ತಮ್ಮ ಜೀವನದ ಬಹುಭಾಗವನ್ನು ಜೈಲಿನಲ್ಲಿ ಕಳೆದರು ಎಂಬುವುದನ್ನು ಯಾರು ನಿರಾಕರಿಸಲಾಗದ ಐತಿಹಾಸಿಕ ಸತ್ಯವಾ ಗಿದೆ. ಗುರುಪ್ರಸಾದ್ ಮಾಸ್ತರ್‌ರನ್ನು ಈ ಸರಕಾರಕ್ಕೆ ಏನೂ ಮಾಡಲು ಸಾಧ್ಯ ವಿಲ್ಲ. ಯಾವುದೇ ನ್ಯಾಯಾಲಯದಲ್ಲಾ ದರೂ ಅವರು ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಬಹುದು. ಬಡ್ಡಿ ಸಮೇತ ಅವರ ವೇತನ ಮತ್ತು ಇತರ ಸೌಲಭ್ಯಗಳು ಅವರಿಗೆ ಲಭಿಸಲಿದೆ. ನ್ಯಾಯಕ್ಕಾಗಿ ನಡೆಯುವ ಈ ಹೋರಾಟಕ್ಕೆ ಅವರಿಗೆ ಅಗತ್ಯವಿರುವ ಎಲ್ಲಾ ಬೆಂಬಲ ಮತ್ತು ನೆರವನ್ನು ನಾವು ನೀಡುತ್ತೇವೆ. ಓಟ್ ಬ್ಯಾಂಕ್ ರಾಜಕಾರಣಿಗಳು ಸೋತು ಸುಣ್ಣ ವಾಗಲಿದ್ದಾರೆ ಎಂದು ಕೆ.ಸುರೇಂದ್ರನ್ ತಿಳಿಸಿದ್ದಾರೆ.

You cannot copy contents of this page