ನಿವೃತ್ತ ಶಿಕ್ಷಕಿ ನಿಧನ
ಮಂಜೇಶ್ವರ: ದೈಗೋಳಿ ನಿವಾಸಿ, ಶ್ರೀ ವಾಣೀವಿಜಯ ಯು.ಪಿ ಶಾಲೆ ಕೊಡ್ಲಮೊಗರು ಇಲ್ಲಿನ ನಿವೃತ ಶಿಕ್ಷಕಿ ಲೀಲಾ [93] ಶನಿವಾರ ರಾತ್ರಿ ಸ್ವ-ಗೃಹದಲ್ಲಿ ನಿಧನರಾದರು. ಇವರು ಅವಿವಾಹಿತೆಯಾಗಿದ್ದಾರೆ. ಶಾಲೆಯಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಮಕ್ಕಳಿಗೆ ನಾಟಕ, ನೃತ್ಯ, ಸಂಗೀತ ಇತ್ಯಾದಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ್ದರು. ಸಹೋದರ ದಿ. ಸೇಸಪ್ಪ ಭಂಡಾರಿಯವರ ಪುತ್ರ ಕೊಡ್ಲಮೊಗರು ಗ್ರಾಮ ಕಚೇರಿ ನೌಕರ ಉದಯ ಕುಮಾರ್, ಇವರ ಪತ್ನಿ ಮೋಹಿನಿ ಜೊತೆ ವಾಸವಾಗಿದ್ದು. ಇವರ ಇತರ ಸಹೋದರ ವೆಂಕಪ್ಪ ಭಂಡಾರಿ, ಸಹೋದರಿ ಲಕ್ಷಿ ಈ ಹಿಂದೆ ನಿಧನರಾಗಿದ್ದಾರೆ.