ನೀರು, ಬೆಳಕಿಲ್ಲದ ಹೀಗೊಂದು ಸರಕಾರಿ ಶಾಲಾ ಕಟ್ಟಡ
ಕಾಸರಗೋಡು: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿರುವು ದಾಗಿ ಸರಕಾರ ತಿಳಿಸುತ್ತಿರುವಾಗಲೇ ನೀರು, ಬೆಳಕಿಲ್ಲದ ಸರಕಾರಿ ಶಾಲಾ ಕಟ್ಟಡವೊಂದು ಕಾಸರಗೋಡಿನಲ್ಲಿ ನೆಲೆಗೊಂಡಿದೆ.
ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಾಗಿ ಹೊಸದಾಗಿ ನಿರ್ಮಿಸಲಾಗಿರುವ ಮೂರು ಅಂತಸ್ತಿನ ಕಟ್ಟಡದ ಸ್ಥಿತಿಯಾಗಿದೆ ಇದು.
ಕಿಫ್ ಯೋಜನೆಯಲ್ಲಿ ಒಳಪಡಿಸಿದ ಕೇರಳ ಕರಾವಳಿ ಅಭಿವೃದ್ಧಿ ನಿಗಮದ ಕಟ್ಟಡ ನಿರ್ಮಿಸಿದೆ. ಇದಕ್ಕಾಗಿ ೧.೬ ಕೋಟಿ ರೂ. ವ್ಯಯಿಸಲಾಗಿದೆ. ಈ ಕಟ್ಟಡ ಆರು ತರಗತಿ ಕೊಠಡಿಗಳನ್ನು ಹೊಂದಿದ್ದು, 180 ವಿದ್ಯಾರ್ಥಿಗಳು ಕಲಿಯುವ ಸೌಕರ್ಯ ಇಲ್ಲಿದೆ. ಮಾತ್ರವಲ್ಲ ಶೌಚಾಲಯ ಇತ್ಯಾದಿ ಸೌಕರ್ಯವೂ ಇದೆ. ಆದರೆ ಅತೀ ಅಗತ್ಯವಿರುವ ನೀರು ಆಗಲೀ ವಿದ್ಯುತ್ ಸಂಪರ್ಕವ ನ್ನಾಗಲೀ ಈ ತನಕ ಕಟ್ಟಡಕ್ಕೆ ಒದಗಿಸಲಾಗಿಲ್ಲ. ಅದರಿಂದಾಗಿ ಈ ಕಟ್ಟಡವನ್ನು ವಿದ್ಯಾರ್ಥಿಗಳ ಕಲಿಕೆಗಾಗಿ ಇನ್ನೂ ತೆರೆದುಕೊಡ ಲಾಗಿಲ್ಲ. ಅಗತ್ಯದ ಸೌಕರ್ಯಗಳನ್ನು ಒದಗಿಸಿ ಕಟ್ಟಡವನ್ನು ಎಂದು ತೆರೆದು ನೀಡಲಾಗುವುದು ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ.