ನೀರ್ಚಾಲು ಓಣಿಯಡ್ಕ ‘ಕೆಸರುಗದ್ದೆಯಲ್ಲಿ ಒಂದು ದಿನ’ ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ಕೇರಳ ಮರಾಟಿ ಸಂರಕ್ಷಣಾ ಸಮಿತಿ ಬದಿಯಡ್ಕ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ‘ಗದೇಂತ್ ಏಕ್ ದೀಸ್’ (ಗದ್ದೆಯಲ್ಲಿ ಒಂದು ದಿನ) ಕಾರ್ಯಕ್ರಮ ಈ ತಿಂಗಳ 18ರಂದು ನೀರ್ಚಾಲ್ ಓಣಿಯಡ್ಕ ಕೆಸರುಗದ್ದೆಯಲ್ಲಿ ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ನೀರ್ಚಾಲು ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಕೃಷ್ಣ ನಾಯ್ಕ ಓಣಿಯಡ್ಕ ಬಿಡುಗಡೆಗೊಳಿಸಿದರು. ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ, ಬದಿಯಡ್ಕ ಪಂ. ಸಮಿತಿ ಅಧ್ಯಕ್ಷ ಗಂಗಾಧರ ಓಣಿಯಡ್ಕ ಉಪಸ್ಥಿತರಿದ್ದರು.