ನೃತ್ಯ ಕಲಿಯುತ್ತಿದ್ದಾಗ ಎಂಟನೇ ತರಗತಿ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತ್ಯು
ಕಾಸರಗೋಡು: ಎಂಟನೇ ತರಗತಿ ವಿದ್ಯಾರ್ಥಿನಿ ನೃತ್ಯ ತರಬೇತಿ ವೇಳೆ ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಪಳ್ಳಿಕೆರೆ ಪಂಚಾಯತ್ನ ತೊಟ್ಟಿ ಕಿಳಕ್ಕೇಕರ ಎಂಬಲ್ಲಿನ ದಿ| ತಾಯತ್ತ್ ವೀಟಿಲ್ ರವೀಂದ್ರನ್ ಎಂಬವರ ಪುತ್ರಿ ಶ್ರೀನಂದ (13) ಮೃತಪಟ್ಟ ದುರ್ದೈವಿಯಾಗಿ ದ್ದಾಳೆ. ಈಕೆ ಪಾಕಂ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ನಿನ್ನೆ ರಾತ್ರಿ ಎಂಟು ಗಂಟೆ ವೇಳೆ ನೃತ್ಯ ಕಲಿಯುತ್ತಿದ್ದಾಗ ಈಕೆ ಕುಸಿದು ಬಿದ್ದಿದ್ದಳು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತಳು ತಾಯಿ ಅಜಿತ, ಸಹೋದರರಾದ ಶ್ರೀಕುಟ್ಟಿ, ಶ್ರೀನಾಥ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.