ನೆಕ್ರಾಜೆ ತರವಾಡು ಶ್ರೀ ವಯನಾಟು ಕುಲವನ್ ದೈವಂಕಟ್ಟು ಮಹೋತ್ಸವ ನಾಳೆಯಿಂದ


ನೆಕ್ರಾಜೆ: ಶ್ರೀ ವಿಷ್ಣುಮೂರ್ತಿ ವಯನಾಟುಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ ನಾಳೆಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ 8 ಗಂಟೆಗೆ ನೆಕ್ರಾಜೆ ಕುಟುಂಬ ಮನೆಯಿಂದ ಹೊರೆಕಾಣಿಕೆ ಮೆರವಣಿಗೆ, ಅಪರಾಹ್ನ 2 ಗಂಟೆಗೆ ಗುಳಿಗ ದೈವದ ಕೋಲ, ಸಂಜೆ 5 ಗಂಟೆಗೆ ಮಹಿಳಾ ಸಮಿತಿ ಸದಸ್ಯೆಯರಿಂದ ಮೆಗಾ ತಿರುವಾದಿರ ಕಳಿ, ರಾತ್ರಿ 7 ಗಂಟೆಗೆ ಕೈವೀದ್, 18ರಂದು ಸಂಜೆ 5 ಗಂಟೆಗೆ ಶ್ರೀ ಕೋರಚ್ಚನ್ ದೈವ, ರಾತ್ರಿ 7ಕ್ಕೆ ನೆಲ್ಲಿತ್ತಲ ತರವಾಡಿನಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, 9 ಗಂಟೆಗೆ ಕಂಡನಾರ್ ಕೇಳನ್ ದೈವದ ವೆಳ್ಳಾಟ, ಬಪ್ಪಿಡಲ್, 12 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಆರಂಭ, 19ರಂದು ಮುಂಜಾನೆ 1 ಗಂಟೆಗೆ ಶ್ರೀ ವಯನಾಟು ಕುಲವನ್ ದೈವದ ವೆಳ್ಳಾಟ, 8 ಗಂಟೆಗೆ ಕೋರಚ್ಚನ್ ದೈವದ ಕೋಲ, ಮಧ್ಯಾಹ್ನ 12 ಗಂಟೆಗೆ ಕಂಡನಾರ್ ಕೇಳನ್ ದೈವದ ಕೋಲ, ಅಪರಾಹ್ನ 3 ಗಂಟೆಗೆ ಶ್ರೀ ವಯನಾಟುಕುಲವನ್ ದೈವದ ಕೋಲ, ಸೂಟೆ ಒಪ್ಪಿಸುವುದು, ಸಂಜೆ 4 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, 6.30ಕ್ಕೆ ತರವಾಡು ಮನೆಗೆ ದೈವಗಳ ಆಗಮನ, 11 ಗಂಟೆಗೆ ವಿಳಕ್ಕಿಲರಿ ನಂತರ ಕೈವೀದ್, ಭಂಡಾರ ನಿರ್ಗಮನ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page