ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಸದ ಅನಿವಾಸಿಯ ಬ್ಯಾಂಕ್ ಖಾತೆಯಿಂದ 10 ಲಕ್ಷ ರೂ. ಲಪಟಾವಣೆ: ಅಸ್ಸಾಂ ನಿವಾಸಿಗಳಿಬ್ಬರ ಸೆರೆ
ಕಾಸರಗೋಡು: ನೆಟ್ ಬ್ಯಾಂ ಕಿಂಗ್, ಮೊಬೈಲ್ ಬ್ಯಾಂಕಿಂಗ್ ಉಪಯೋಗಿಸದ ಕಾಸರಗೋಡು ನಿವಾಸಿಯ ಎನ್ಆರ್ಐ ಬ್ಯಾಂಕ್ ಖಾತೆಯಿಂದ 10 ಲಕ್ಷ ರೂಪಾ ಯಿ ಆನ್ಲೈನ್ ಮೂಲಕ ಲಪಟಾ ಯಿ ಸಿದ ಘಟನೆಯಲ್ಲಿ ಇಬ್ಬರು ಅಸ್ಸಾಂ ನಿವಾಸಿಗಳನ್ನು ಬಂಧಿಸಲಾ ಗಿದೆ. ಆಶಿಕೂಲ್ ಇಸ್ಲಾಂ (19), ಫೋಯಿಜುಲ್ಹಕ್ (41) ಎಂಬಿವರನ್ನು ಕಾಸರಗೋಡು ನಗರ ಠಾಣೆ ಇನ್ಸ್ಪೆಕ್ಟರ್ ನಳಿನಾಕ್ಷನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಯಾದ ಇನ್ನೋರ್ವ ಆರೋಪಿ ಪ್ರಸ್ತುತ ತಲೆಮರೆಸಿಕೊಂಡಿ ದ್ದಾನೆ. 2023 ಎಪ್ರಿಲ್ 1 ಹಾಗೂ 2024 ಜೂನ್ 30ರ ಮಧ್ಯೆ ಹಲವು ಬಾರಿಯಾಗಿ ಖಾತೆ ಮಾಲಕ ತಿಳಿಯದೆ ಹಣವನ್ನು ಆನ್ಲೈನ್ ಮೂಲಕ ಹಿಂತೆಗೆಯ ಲಾಗಿದೆ. ಫೋನ್ ಕೂಡಾ ಉಪಯೋಗಿಸದ ಅನಿವಾಸಿಯ ಹಣವನ್ನು ಆನ್ಲೈನ್ ಮೂಲಕ ಹೇಗೆ ಹಿಂತೆಗೆಯಲಾಗಿದೆ ಎಂಬುವುದು ತಿಳಿದುಬಂದಿಲ್ಲ. ನಗರಠಾಣೆ ಇನ್ಸ್ಪೆಕ್ಟರ್ ನಳಿನಾಕ್ಷನ್ ನೇತೃತ್ವದ ತಂಡ ನಡೆಸಿದ ವೈಜ್ಞಾನಿಕ ತನಿಖೆ ವೇಳೆ ಅನಿವಾಸಿಯ ಐಸಿಐಸಿಐ ಬ್ಯಾಂಕ್ ಖಾತೆಯ ಆನ್ಲೈನ್ ವ್ಯವಹಾರಗಳು ನಡೆದಿರುವುದು ಮಲಪ್ಪುರಂ, ತೃಶೂರು ಜಿಲ್ಲೆಗಳಲ್ಲಿ ಹಾಗೂ ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಾಗಿದೆಯೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಅಸ್ಸಾಂಗೆ ತೆರಳಿ ನಡೆಸಿದ ತನಿಖೆ ಮಧ್ಯೆ ಅಸ್ಸಾಂನ ಮೋರಿ ಗೋನ್ ಜಿಲ್ಲೆಯಲ್ಲಿರುವವರು ವಂಚನೆ ನಡೆಸಿರುವುದಾಗಿ ಪತ್ತೆಹಚ್ಚ ಲಾಗಿದೆ. ಮೂವರು ಆರೋಪಿಗಳ ಕುರಿತಾಗಿ ಸ್ಪಷ್ಟ ಮಾಹಿತಿ ಲಭಿಸಿದ ತಕ್ಷಣ ತನಿಖೆ ಚುರುಕುಗೊಳಿಸಲಾಗಿದೆ. ಬಳಿಕ ಅಸ್ಸಾಂ ಪೊಲೀಸರು ನಡೆಸಿದ ಶೋಧದಲ್ಲಿ ಆರೋಪಿಗಳು ಪ್ರಸ್ತುತ ಅಲ್ಲಿಲ್ಲವೆಂದು ತಿಳಿದುಬಂತು. ಆರೋಪಿಗಳ ವಾಸಸ್ಥಳದಿಂದ ಲಭಿಸಿದ ಸೂಚನೆಗಳ ಆಧಾರದಲ್ಲಿ ಆರೋಪಿಗಳು ಕೇರಳಕ್ಕೆ ಪರಾರಿಯಾಗಿರುವುದಾಗಿ ತಿಳಿದುಬಂ ದಿತ್ತು. ಅನಂತರ ಮಲ ಪ್ಪುರಂ, ತೃಶೂರು ಜಿಲ್ಲೆಗಳಲ್ಲಿ ನಡೆಸಿದ ಹುಡುಕಾಟದಲ್ಲಿ ಅಸ್ಸಾಂ ನಿವಾಸಿಗಳಾದ ಇಬ್ಬರನ್ನು ಪೊಲೀ ಸರು ಸೆರೆಹಿಡಿದಿದ್ದಾರೆ. ಇನ್ ಸ್ಪೆಕ್ಟರ್ ನಳಿನಾಕ್ಷನ್ರ ಜೊತೆಗೆ ಸಬ್ ಇನ್ಸ್ಪೆಕ್ಟರ್ ರುಮೇಶ್, ಸೀನಿ ಯರ್ ಪೊಲೀಸ್ ಆಫೀ ಸರ್ ಗಳಾದ ಚಂದ್ರಶೇಖರನ್, ಸತೀಶನ್.ಪಿ, ಪಿ.ವಿ. ಲಿನೀಶ್, ಕೆ.ಟಿ. ಅನಿಲ್, ಶ್ರೀಜೇಶ್, ಕೆ.ಎಂ. ಸುನಿಲ್ ಕುಮಾರ್ ಎಂಬಿವರು ತನಿಖಾ ತಂಡದಲ್ಲಿದ್ದರು.