ನೆಲ್ಲಿಕುಂಜೆ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜನ್ಮ ದಿನಾಚರಣೆ
ಕಾಸರಗೋಡು: ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ದಿನವನ್ನು ವಿವಿಧ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಯಿತು. ಕ್ಷೇತ್ರದ ಪ್ರಧಾನ ಅರ್ಚಕ ಅನೀಶ್ ಕುಮಾರ್ ನೇತೃತ್ವದಲ್ಲಿ ಗುರುಪೂಜೆ ನಡೆಯಿತು. ನಂತರ ಕ್ಷೇತ್ರ ಸಮಿತಿ ಅಧ್ಯಕ್ಷ ಎನ್. ಸತೀಶ್ ಧ್ವಜಾರೋ ಹಣಗೈದರು. ಕ್ಷೇತ್ರದ ಗೌರವಾಧ್ಯಕ್ಷ ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್, ಗಣೇಶ್ ಪಾರೆಕಟ್ಟೆ, ಉಮೇಶ್, ರಮೇಶ್, ಬಾಬು, ನಿರ್ಮಲ, ಉಪೇಂ ದ್ರ, ಮಂಜುನಾಥ, ಅರವಿಂದ, ಸಜೇಶ್, ಸುನಿಲ್ ಕುಮಾರ್, ಸುಕೀರ್ತಿ, ಶರತ್, ಧನೇಶ್ ಸಹಿತ ಹಲವರು ಭಾಗವಹಿಸಿದರ.