ನೆಲ್ಲಿಕುಂಜೆ ನಿವಾಸಿ ಸೌದಿಯಲ್ಲಿ ಮೃತ್ಯು
ಕಾಸರಗೋಡು: ನೆಲ್ಲಿಕುಂಜೆ ನಿವಾಸಿ ಸೌದಿಯಲ್ಲಿ ಮೃತಪಟ್ಟರು. ನೆಲ್ಲಿಕುಂಜೆಯ ದಿ| ಬಿ.ಎಂ. ಮೊಯ್ದೀನ್ ಕುಟ್ಟಿ- ಫಾತಿಮ ದಂಪತಿ ಪುತ್ರ ಅಬ್ದುಲ್ ಹಮೀದ್ (೫೪) ಮೃತಪಟ್ಟವರು. ನಿನ್ನೆ ರಾತ್ರಿ ಕೆಲಸದ ಸ್ಥಳದಲ್ಲಿ ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡುಹೋಗಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.
ಮೃತರು ಪತ್ನಿ ಸುಬೈದ ಮೊಗ್ರಾಲ್ ಪುತ್ತೂರು, ಮಕ್ಕಳಾದ ಆಬಿದ್, ಅಸಿತ, ಅಫಿತ, ಸಹೋದರರಾದ ರಾಬಿಯ, ಅಬ್ದುಲ್ ಅಸೀಸ್, ಅಬ್ದುಲ್ ರಶೀದ್, ಅಬ್ದುಲ್ ಜಲೀಲ್, ಖಲೀಲ್, ಅಬ್ದುಲ್ ಸತ್ತಾರ್, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯಕ್ರಿಯೆ ಸೌದಿಯಲ್ಲಿ ನಡೆಯಲಿದೆ.